Showing posts with label ಸರ್ವವಿಘ್ನ ಪ್ರಶಮನಂ ಸರ್ವ ಸಿದ್ಧಿ ಕರಂ purandara vittala. Show all posts
Showing posts with label ಸರ್ವವಿಘ್ನ ಪ್ರಶಮನಂ ಸರ್ವ ಸಿದ್ಧಿ ಕರಂ purandara vittala. Show all posts

Friday, 6 December 2019

ಸರ್ವವಿಘ್ನ ಪ್ರಶಮನಂ ಸರ್ವ ಸಿದ್ಧಿ ಕರಂ purandara vittala

ಸರ್ವ ವಿಘ್ನ ಪ್ರಶಮನಂ
ಸರ್ವ ಸಿದ್ಧಿ ಕರಂ ಪರಮ್ |
ಸರ್ವ ಜೀವ ಪ್ರಣೇತಾರಂ
ವಂದೇ ವಿಜಯದಂ ಹರಿಮ್ ||

ಸತತ ಗಣನಾಥ ಸಿದ್ಧಿಯ ನೀವಕಾರ್ಯದಲಿ |
ಮತಿಪ್ರೇರಿಸುವಳು ಪಾರ್ವತಿ ದೇವಿಯು ಮು- |
ಕುತಿ ಪಥಕೆ ಮನವೀವ ಮಹಾರುದ್ರ ದೇವರು ಹರಿಭ- |
ಕುತಿ ದಾಯಕಳು ಭಾರತಿದೇವಿ ಯು- |
ಕುತಿ ಶಾಸ್ತ್ರಗಳಲ್ಲಿ ವನಜ ಸಂಭವ ನರಸಿ |
ಸತ್ಕರ್ಮಗಳ ನಡೆಸಿ ಸುಜ್ಞಾನ ಮತಿಯಿತ್ತು |
ಗತಿ ಪಾಲಿಸುವ ನಮ್ಮ |
ಪವಮಾನನು ||
ಚಿತ್ತದಲಿ ಆನಂದ ಸುಖವನೀವಳು ರಮಾ |
ಭಕುತ ಜನರೊಡೆಯ ನಮ್ಮ ಪುರಂದರ ವಿಠ್ಠಲನು |
ಸತತ ಇವರೊಳು ನಿಂತೀ-
ಕೃತಿಯ ನಡೆಸುವನು ||
*******