Showing posts with label ಸೋಮಸುರ್ಯೋಪರಾಗದಲಿ jagannatha vittala. Show all posts
Showing posts with label ಸೋಮಸುರ್ಯೋಪರಾಗದಲಿ jagannatha vittala. Show all posts

Saturday, 14 December 2019

ಸೋಮಸುರ್ಯೋಪರಾಗದಲಿ ankita jagannatha vittala

ಜಗನ್ನಾಥದಾಸರು
ಸೋಮ ಸುರ್ಯೋಪರಾಗದಲಿ ಗೋಸಹಸ್ರಗಳ
ಭೂಮಿದೇವರಿಗೆ ಸುರನದಿಯ ತಟದಿ
ಶ್ರೀ ಮುಕುಂದಾರ್ಪಣವೆನುತ ಕೊಟ್ಟ ಫಲವಕ್ಕು
ಈ ಮಧ್ವನಾಮ ಬರೆದೋದಿದವರಿಗೆ 1

ಪುತ್ರರಿಲ್ಲದವರು ಸತ್ಪುತ್ರರೈದುವರು ಸ
ರ್ವತ್ರದಲಿ ದಿಗ್ವ್ವಿಜಯವಹುದು ಸಕಳ
ಶತ್ರುಗಳು ಕೆಡುವರಪಮೃತ್ಯು ಬರಲಂಜುವುದು
ಸೂತ್ರನಾಮಕನ ಸಂಸ್ತುತಿ ಮಾತ್ರದೀ 2

ಶ್ರೀ ಪಾದರಾಯರು ಪೇಳಿದ ಮಧ್ವ ನಾಮ ಸಂ
ತಾಪ ಕಳೆದಖಿಳ ಸೌಖ್ಯನೀವುದೂ
ಶ್ರೀಪತಿ ಜಗನ್ನಾಥವಿಠಲನ ತೋರಿ ಭವ
ಕೂಪಾರದಿಂದ ಕಡೆಹಾಯಿಸುವುದು 3
******