Showing posts with label ಎಂಥ ದಯಾವಂತನೊ ಲಕ್ಷುಮಿಕಾಂತ ಎಂಥ prasannavenkata ENTHA DAYAAVANTANO LAKSHUMIKAANTA ENTHA. Show all posts
Showing posts with label ಎಂಥ ದಯಾವಂತನೊ ಲಕ್ಷುಮಿಕಾಂತ ಎಂಥ prasannavenkata ENTHA DAYAAVANTANO LAKSHUMIKAANTA ENTHA. Show all posts

Tuesday 9 November 2021

ಎಂಥ ದಯಾವಂತನೊ ಲಕ್ಷುಮಿಕಾಂತ ಎಂಥ ankita prasannavenkata ENTHA DAYAAVANTANO LAKSHUMIKAANTA ENTHA





by ಪ್ರಸನ್ನವೆಂಕಟದಾಸರು

ಎಂಥ ದಯಾವಂತನೊ ಲಕ್ಷುಮಿಕಾಂತ
ಎಂಥ ದಯಾವಂತನೊ ಪ.

ಕರಿಜನ್ಮ ತಾಳ್ದರಸ ನೀರೊಳಗೆ ನಕ್ಕರಿಯೊಳು ಕಾದಿ ಮುಳುಗಿ ಹರಿಹರಿಹೊರಿಯೆಂದು ಹರಣವ ತೊರೆವಾಗಬರಿಮಂಡೆಯಲಿ ಬಿಟ್ಟರಸಿಯ ಭರದ್ಯುದ್ಧರಿಸಿದೆ ಭಳಿ ಕಿಂಕರರಭಿಮಾನಿ 1

ಶೂಲಿಯ ಮತಿಕದ್ದುವರಕೊಂಡು ಮಹಾಸುರಮೇಲೆ ಬೆಂಬತ್ತಿ ಓಡಲುಶ್ರೀಲೋಲಾಕಾಲಕೆ ಆಲೋಚಿಸಿಬಾಲೆಯ ಲೀಲೆಲಿ ಖಳನ ಜ್ವಲಿಸಿ ಕಪಾಲಿಯ ಪಾಲಿಸಿದೆ ಸುರ ಶಾರ್ದೂಲ 2

ನಿನ್ನನುಜೆಯಮಾನವಕೊಂಡೇನೆಂದುಕುನ್ನಿ ಕೌರವನೆಳೆಯೆ ಕೃಷ್ಣಣ್ಣ ಪ್ರಸನ್ವೆಂಕಟ ರನ್ನ ಬಾರೆನ್ನಲುಪುಣ್ಯ ಪುರುಷವರೇಣ್ಯ ನೀ ಬಂದೆಮನ್ನಿಸಿ ಬಣ್ಣ ಬಣ್ಣದ ವಸ್ತ್ರವÀನುಡಿಸಿದೆ 3
****