Showing posts with label ಮಂಡೆ ಬೋಳಾದ ಸನ್ಯಾಸಿಯು ಮನೆ ಬಂದ್ಹೊಕ್ಕನಮ್ಮ purandara vittala. Show all posts
Showing posts with label ಮಂಡೆ ಬೋಳಾದ ಸನ್ಯಾಸಿಯು ಮನೆ ಬಂದ್ಹೊಕ್ಕನಮ್ಮ purandara vittala. Show all posts

Friday, 6 December 2019

ಮಂಡೆ ಬೋಳಾದ ಸನ್ಯಾಸಿಯು ಮನೆ ಬಂದ್ಹೊಕ್ಕನಮ್ಮ purandara vittala

ರಾಗ ಸೌರಾಷ್ಟ್ರ ಆದಿ ತಾಳ 

ಮಂಡೆ ಬೋಳಾದ ಸನ್ಯಾಸಿಯು ಮನೆ ಬಂದ್ಹೊಕ್ಕನಮ್ಮ ||ಪ||

ಎನ್ನ ಗಂಡನ ಕಿವಿಯೂದಿ ಮರುಳು ಮಾಡಿ ಮನೆಗೊಂಡನಮ್ಮ ||ಅ||

ಮಡಿಯ ಮಾಡಿ ಮೈತೊಳೆದು ನಾವುಣ್ಣಲಾರೆವಮ್ಮ
ನಡತೆ ತಪ್ಪಿತೆಂದೊಬ್ಬರು ನಮ್ಮನು ದಂಡಿಸಿದ್ದಿಲ್ಲವಮ್ಮ
ನುಡಿಯಲೆಷ್ಟೆಂದ ವೈಷ್ಣವತನ ಬೇಸರವಿಟ್ಟಿತಮ್ಮ
ಕಡುಮೂರ್ಖ ಸನ್ಯಾಸಿ ಬಂದಿವ ನೋಡಿರಮ್ಮ ||

ಮುತ್ತೈದೇರು ನಾವು ಹಣೆತುಂಬ ಕುಂಕುಮ ಇಡುವೆವಮ್ಮ , ನಾವು
ಎತ್ತ ಹೋದರೆ ತುತ್ತು ಬುತ್ತಿಯ ಕೊಂಡೊಯ್ದು ಉಂಬೆವಮ್ಮ
ತೊತ್ತುಬಂಟರ ನೀರಲ್ಲದೆ ಮತ್ತೊಂದು ಅರಿಯೆವಮ್ಮ , ಈ
ಮೃತ್ಯುಸನ್ಯಾಸಿ ಬಂದಿವನೆಲ್ಲ ಬಿಡಿಸಿದ ನೋಡಿರಮ್ಮ ||

ಬೆಳ್ಳುಳ್ಳಿ ನುಗ್ಗೆಕಾಯಿ ಕವಡಿಕಾಯಿಗಳು ತಿಂಬೆವಮ್ಮ
ಮುಲ್ಲಂಗಿ ಪಲ್ಲೆ ಗೆಜ್ಜರಿ ಪುಂಡೆಪಲ್ಲೆವು ಸಾಲದಮ್ಮ
ಸುಳ್ಳು ಯಾಕಾಡಲಿ ಗಂಡಸರು ತಂಗಳುಂಬೋರಮ್ಮ
ಇಲ್ಲಿಗೆ ಆಯಿತೆಮ್ಮಾಚಾರವೆನಬೇಡಿ ಕೇಳಿರಮ್ಮ ||

ಏಕಾದಶಿ ದಿನ ಅವರೆ ಗುಗ್ಗುರಿಗಳು ತಿಂಬೆವಮ್ಮ , ಮೇಲೆ
ಬೇಕಾದರೆ ನಾಲ್ಕು ದೋಸೆಯ ಮಾಡಿ ತಿಂಬೆವಮ್ಮ
ಸಾಕಾಗದಿದ್ದರೆ ಮೊಸರು ಮಜ್ಜಿಗೆಗಳ ಕುಡಿವೆವಮ್ಮ , ಈ
ಕಾಕುಸನ್ಯಾಸಿ ಬಂದವನೆಲ್ಲ ಬಿಡಿಸಿದ ನೋಡಿರಮ್ಮ ||

ಹಸನಾದ ಪರ್ವಕಾಲಗಳಲಿ ಪತಿಸಂಗವಹುದಮ್ಮ
ಬಸಿರಾದರು ಎನ್ನ ಪ್ರಸವಾಗೊ ಪರಿಯಂತ ಬಿಡನೇಯಮ್ಮ
ಹುಸಿಯೆನ್ನೇಕಾಡಲಿ ಗಂಡಸುತನ ಘಟ್ಯಾಗಿಹುದಮ್ಮ , ಅದರ
ದೆಸೆಯಿಂದ ನಾಲ್ಕು ಮಕ್ಕಳು ಬೇಗ ಹಡೆದೆನಮ್ಮ ||

ದಶಮಿ ಏಕಾದಶಿ ದ್ವಾದಶಿಯೆಂಬೋದು ಅರಿಯೆವಮ್ಮ , ಹರಿ
ಹೆಸರಲಿ ಪಕ್ಷಕ್ಕೊಂದುಪವಾಸವರಿಗೆ ದೊರಕಿತಮ್ಮ
ವಸುಧೆಯೊಳಗೆ ಮಧ್ವಮತವೆಂಬೋದು ಸಿದ್ಧವಾಯಿತಮ್ಮ
ಪುಸಿಯಲ್ಲ ಪುರಾಣ ಪುಣ್ಯಕಥೆಗಳು ಹೆಚ್ಚಿತಮ್ಮ ||

ಅನ್ಯ ದೇವರಿಗೆ ನೈವೇದ್ಯನಿಟ್ಟುಂಬೋದು ಅರಿಯೆವಮ್ಮ ,
ಹನ್ನೊಂದು ಕಾಸಾಗಿ ತಾಗೀಗ ಕಾಸು ಹೊನ್ನಾಯಿತಮ್ಮ
ನಿನ್ನಾಣೆಲೆ ಸಖಿ ಮೊಗತನ ಕೆಟ್ಟು ಹೋಯಿತಮ್ಮ
ಚೆನ್ನ ಪುರಂದರವಿಠಲನ ಭಜಿಸಿದ ಧರ್ಮವಮ್ಮ ||
***

pallavi

maNDe bOLAda sanyASiyu mane bandhokkanamma

anupallavi

enna gaNDana kiviyUdi maruLu mADi manakoNDanamma

caraNam 1

maDiya mADi maitoLedu nAvuNNalArevamma naDade tappidendobbaru nammanu daNDisiddillavamma
nuDiyaleSTenda vaiSNava tana bEsaraviTTidamma kaDU mUrkha sanyASi bandiva nODiramma

caraNam 2

muttaidEru nAvu haNetumba kumkuma iDuvevamma nAvu etta hOdare tuttu buddhiya koNDoidu
umbevamma tottu baNTara nIrallade mattondu ariyevamma I mrtyu sanyAsi bandivanella biDisida nODiramma

caraNam 3

beLLuLLi nugge kAyi kavaDi kAyigaLu timbevamma mullangi balle gejjari puNDe ballevu sAladamma
suLLyAkADali kaNDasaru tangalumbOramma illige AyidemmAcAravena bEDi kELiramma

caraNam 4

EkAdashi dina avare guggurigaLu timbevamma mEle bEkAdare mAlku dOseya mADi timbevamma
sAkAgadiddare mosaru majjigegLa kuDivevamma I kAku sanyASi bandavanella biDisida nODiramma

caraNam 5

hasanAda parvakAlagaLali pati sangavahudamma basirAdaru enna prasavAko pariyantra biDanEyamma
husiyennEkADali gaNDasutana gaTyAgihudamma adara dEseyinda nAlku makkaLu bEga haDedenamma

caraNam 6

dashami EkAdashi dvAdashiyembOdu ariyevamma hari hesarali pakSakkond-upavAsavarige dorakitamma
vasudheyoLage madhva matavembOdu siddhavAyitamma pusiyalla purANa puNya kathegaLu heccidamma

caraNam 7

anya dEvarige naivEDyaniTTumbOdu ariyevamma hannondu kAsAgi tAgIga kAsu honnAyitamma
ninnANale sakhi pogatana keTTu hOyitamma cenna purandara viTTalana bhajisida dharmavamma
***