ಗೋಪಿ ಬಾಲನೆ ಬಹುಗುಣಶೀಲನೆಗೋವಳಪಾಲನೆ ನೋಡುವೆ ಬಾ ಬಾ ಬಾ ಪ
ಗೋಪ ರೂಪನೆ ಪಾಪ ದೂರನೆನೀಪದೊಳು ಕುಳಿತು ಗೋಪೇರ ವಸ್ತ್ರವಶ್ರೀಪತಿ ನೀಡಿದಿ ಬಾ ಬಾ ಬಾ 1
ಸಿಂಧು ಮಂದಿರ ಸುಂದರಾಂಬರಮಂದಹಾಸವ ಮಾಡಿ ವಂದಾರುಗಳ ಮಾಡಿಆನಂದದಿ ನೋಡುವೆ ಬಾ ಬಾ ಬಾ 2
ದೋಷದೂರನೆ ವಾಸುದೇವನೆಶೇಷಗಿರಿಯಲಿ ನಿಂತು ದಾಸ ಜನರಿಗೆಲ್ಲಇಂದಿರೇಶನೆ ಕಾಯುವಿ ಬಾ ಬಾ ಬಾ3
****