Showing posts with label ಬೀಜ ಮೂರನ್ನು ಬಿತ್ತಿ ಸಾಜಬೀಜವ neleyadikeshava. Show all posts
Showing posts with label ಬೀಜ ಮೂರನ್ನು ಬಿತ್ತಿ ಸಾಜಬೀಜವ neleyadikeshava. Show all posts

Tuesday, 15 October 2019

ಬೀಜ ಮೂರನ್ನು ಬಿತ್ತಿ ಸಾಜಬೀಜವ ankita neleyadikeshava

ರಾಗ: ಸೌರಾಷ್ಟ್ರ  ತಾಳ: ಮಟ್ಟೆ

ಬೀಜ ಮೂರನ್ನು ಬಿತ್ತಿ ಸಾಜಬೀಜವ ತೋರಿರಿ
ರಾಜರಿಗೆ ಒಂದು ಫಲ ರಾಜ್ಯಕ್ಕೆ ಎರಡು ||

ಬೀಜ ಕರಿದಕೆ ಕಾಲು ಬೀಜ ಬಿಳಿದಕೆ ಮೋರೆ
ಬೀಜ ಮತ್ತೊಂದಕ್ಕೆ ಹದಿನೆಂಟು ಕಣ್ಣು
ರಂಜಕದ ಬೇರಿಗೆ ರಾಗ ಮುವತ್ತೆರಡು
ಕುಂಜರದಗಮನೆ ಕೋವಿದನರಸಿ ||

ಐದು ಮಾತಿನ ಮೇಲೆ ವೈದಿಕನೆಂಬರು
ಐದು ದೀವಿಗೆ ಗಾಳಿ ಮುಸುಕಿತೆಂದು
ಧೂಳಿಗೆ ಹಾರುವ ಮಣ್ಣ ಮೇಲೆ ಮುದ್ದೆಯ ಕಲಸಿ
ಲೋಲನಾಗಿದು ಸೊಬಗಾದ ಬೆಡಗು ||

ಎರಡು ನಂದಿಯ ಹೂಡಿ ಗರುಡವಾಹನನಾಗಿ
ಬರುತ ಭೋರಿಡುತ್ತಿದೆ ಅರಿಗೆ ಮೀರಿ
ಹರಿದಾಸಕನಕನು ಹಾಕಿದ ಮುಂಡಿಗೆ
ಸಿರಿಆದಿಕೇಶವನಾಣೆ ಬಲ್ಲವರು ಪೇಳಿ ||
********