Showing posts with label ಕಾವೇರಿ ತ್ರಿಭುವನಕಾಯೆ ಸುರಮುನಿಗೇಯೆ vijaya vittala. Show all posts
Showing posts with label ಕಾವೇರಿ ತ್ರಿಭುವನಕಾಯೆ ಸುರಮುನಿಗೇಯೆ vijaya vittala. Show all posts

Wednesday, 16 October 2019

ಕಾವೇರಿ ತ್ರಿಭುವನಕಾಯೆ ಸುರಮುನಿಗೇಯೆ ankita vijaya vittala

ಕಾವೇರಿ ತ್ರಿಭುವನಕಾಯೆ | ಸುರಮುನಿಗೇಯೆ |
ಕಾವೇರಿ | ಆವಾವ ಜನುಮಕೆ ಬಿಡದೆ ಎನ್ನನು ಕಾಯೆ ಪ

ಅಜನನಂದನೆ ಚಂದ್ರವದಗೆ | ಚತುರಮಯೆ |
ಸುಜನರಿಗಾನಂದ ಸದಗೆ | ಧವಳಕಾಯೆ |
ಭಜಿಸಿ ಬೇಡುವೆ ನಿನಗಿದನೆ |
ಸೃಜಿಸಿ ಕೊಡುವುದು |
ತ್ರಿಜಗದೊಳಗೆ ಹರಿ |
ನಿಜ ಭಕ್ತರಪಾದ | ರಜವಾಗಿ ಯಿಪ್ಪ ಸ |
ಹಜ ಮತಿಯನುದಿನ | ಕುಜನ ನಿವಾರೆ 1

ಕಲಿನಾಶ ಕಾರುಣ್ಯ ನಿಧಿಯೆ | ನಿರ್ಮಳಶೀಲೆ |
ಕಲಕಾಲಾ ಸುಜ್ಞಾನಾಂಬುಧಿಯೆ |
ತಲೆವಾಗಿ ನಮಿಸುವೆ |
ಹಲವು ಜನ್ಮಂಗಳ | ಒಳಗೊಳಗೆ ಬಿದ್ದು |
ಹಲಬುತಿಪ್ಪ ವ್ಯಾ |
ಕುಲವನು ಕಳೆದು ನಿ |
ಶ್ಚಲ ಮತದೊಳಗಿಡು 2

ನಿತ್ಯ ಉತ್ತಮ ಗುಣಸಮುದ್ರೇ |
ಸಿಂಹಜೆ ಮಾರುದೃತೆ ಎನಿಪ ಲೋಪಾಮುದ್ರೆ |
ಕವೇರಕನ್ಯೆ ......ಗಿತ್ತ ಪೊಳೆವ ಸೂಭದ್ರೆ |
ಸತ್ಯ ಸಂಕಲ್ಪ ಶ್ರೀ ವಿಜಯವಿಠ್ಠಲನ್ನ ಭೃತ್ಯನೆನೆಸಿಕೊಂಡು
ಸ್ರೌತ್ಯದಿಂದಲಿ ಬಲು |
ನೃತ್ಯಮಾಡುವ ಸಂ |ಪತ್ತನೆ ಕರುಣಿಸು 3
**********