..
kruti by ವಿದ್ಯಾರತ್ನಾಕರತೀರ್ಥರು vidyaratnakara teertharu
ರಾಘವೇಂದ್ರ ಸಲಹೊ ಗುಣಸಾಂದ್ರ ಪ
ಭಗವದ್ಗೀತಾ ವಿವರಣ ತಂತ್ರದೀಪ
ನಿಗಮತತಿಗೆ ಖಂಡಾರ್ಥವ ರಚಿಸಿ
ಖಗರ್ಥಗಳನು ಅತಿ ಸ್ಫುಟವಾಗಿ ವಿವರಿಸಿ
ಖಗವಾಹನ ತೋರಪಡಿಸಿದ ಧೀರ 1
ಧರಣಿ ವಿಜರರಿಗೆ ವರಗಳ ಕೊಡುವಂಥ
ಸುರತರುವೆ ನಿಂಗೆ ಕರಗಳ ಮುಗಿದು
ಪರಮಪುರುಷ ಹರಿಚರಣ ಕಮಲದಲಿ
ಸ್ಥಿರವಾದ ಭಕುತಿಯ ಬೇಡುವೆ ಧೀರ 2
ಚಂಡ ಕುಮತಗಳ ಖಂಡಿಸಿ ಬುಧಜನ
ಮಂಡಲದೊಳಗೆ ಪ್ರಚಂಡನೆಂದೆನಿಸಿ
ಕುಂಡಲಿಶಯನ ಪಾದಮಂಡಿತ ಹೃದಯ ಭೂ
ಮಂಡಲದೊಳಗೆ ಅಖಂಡಲನಾದ 3
ಶ್ರದ್ಧೆಯಿಂದಲಿ ವರ ಮಧ್ವಾಚಾರ್ಯರ ಮತ
ಪದ್ಧತಿ ಬಿಡದಂತ ಬುದ್ಧಿಯನಿತ್ತು
ಉದ್ಧರಿಸಯ್ಯ ಕೃಪಾಬ್ಧಿಯೇ ಬುಧಜನಾ
ರಾದ್ಯಚರಣ ಪರಿಶುದ್ಧ ಚರಿತ್ರ 4
ಕಾಮಜನಕನಾದ ನಾಮಗಿರೀಶ್ವರಿ
ಸ್ವಾಮಿ ನೃಹರಿಪಾದ ತಾಮರಸಂಗಳ
ಪ್ರೇಮದಿ ಪೂಜಿಪೆನೆಂಬೊ ಕಾಮಿತವರ ನೀಡೊ
ಶ್ರೀ ಮತ್ಸುಧೀಂದ್ರಕರ ತಾಮರಸಭವನೆ 5
***