Showing posts with label ನೀನೇ ಗತಿಯೆಂದು ನಂಬಿದೆ ಕಾಯಯ್ಯ prasannavenkata. Show all posts
Showing posts with label ನೀನೇ ಗತಿಯೆಂದು ನಂಬಿದೆ ಕಾಯಯ್ಯ prasannavenkata. Show all posts

Wednesday, 13 November 2019

ನೀನೇ ಗತಿಯೆಂದು ನಂಬಿದೆ ಕಾಯಯ್ಯ ankita prasannavenkata

by ಪ್ರಸನ್ನವೆಂಕಟದಾಸರು
ನೀನೆ ಗತಿಯೆಂದು ನಂಬಿದೆ ಕಾಯಯ್ಯ ಶ್ರೀನಿವಾಸ ಎನ್ನಹೀನಗುಣಗಳೆಣಿಸಲಿ ಬ್ಯಾಡ ದಯಮಾಡೊ ಶ್ರೀನಿವಾಸ 1

ನಾನಾ ದುಷ್ಕøತಫಲವ ಉಂಡೆ ಇನ್ನಾರೆ ಶ್ರೀನಿವಾಸಎಂದೂ ದುರ್ವಿಷಯಕೆಮನ ಎರಗದಂತೆ ಮಾಡೊ ಶ್ರೀನಿವಾಸ 2

ಸತ್ಕಥಾ ಶ್ರವಣ ಭಾಗ್ಯವ ಕೊಡುಅನುದಿನಶ್ರೀನಿವಾಸ ಎನ್ನಹೃತ್ಕಮಲದಿ ವ್ಯಕ್ತನಾಗಯ್ಯ ಶ್ರೀನಿವಾಸ 3

ಪುತ್ರಕಳತ್ರಮಿತ್ರರು ನಿನ್ನ ದಾಸರೊ ಶ್ರೀನಿವಾಸ ತ್ವದ್ಭøತ್ಯಭೃತ್ಯರ ಪರಿಚಾರಕ ನಾನು ಶ್ರೀನಿವಾಸ 4

ಅನಂತ ಜನ್ಮದ ಸತ್ಕರ್ಮ ನಿನಗೇವೆ ಶ್ರೀನಿವಾಸನಿತ್ಯದೀನೋದ್ಧಾರÀ ಪ್ರಸನ್ನವೆಂಕಟ ಮುಕುಂದ ಶ್ರೀನಿವಾಸ 5
***

ನೀನೆ ಗತಿಯೆಂದು ನಂಬಿದೆ ಕಾಯಯ್ಯ ಶ್ರೀನಿವಾಸ ಎನ್ನ
ಹೀನಗುಣಗಳೆಣಿಸಲಿ ಬ್ಯಾಡ ದಯಮಾಡೊ ಶ್ರೀನಿವಾಸ || 1 ||

ನಾನಾ ದುಷ್ಕøತಫಲವ ಉಂಡೆ ಇನ್ನಾರೆ ಶ್ರೀನಿವಾಸ
ಎಂದೂ ದುರ್ವಿಷಯಕೆ ಮನ ಎರಗದಂತೆ ಮಾಡೊ ಶ್ರೀನಿವಾಸ || 2 ||

ಸತ್ಕಥಾ ಶ್ರವಣ ಭಾಗ್ಯವ ಕೊಡು ಅನುದಿನ ಶ್ರೀನಿವಾಸ
ಎನ್ನಹೃತ್ಕಮಲದಿ ವ್ಯಕ್ತನಾಗಯ್ಯ ಶ್ರೀನಿವಾಸ || 3 ||

ಪುತ್ರ ಕಳತ್ರ ಮಿತ್ರರು ನಿನ್ನ ದಾಸರೊ ಶ್ರೀನಿವಾಸ ತ್ವದ್ಭತ್ಯ
ಭೃತ್ಯರ ಪರಿಚಾರಕ ನಾನು ಶ್ರೀನಿವಾಸ || 4 ||

ಅನಂತ ಜನ್ಮದ ಸತ್ಕರ್ಮ ನಿನಗೇವೆ ಶ್ರೀನಿವಾಸ ನಿತ್ಯ
ದೀನೋದ್ಧಾರ ಪ್ರಸನ್ನವೆಂಕಟ ಮುಕುಂದ ಶ್ರೀನಿವಾಸ || 5 ||
***

Nīne gatiyendu nambide kāyayya śrīnivāsa

enna hīnaguṇagaḷeṇisali byāḍa dayamāḍo śrīnivāsa || 1 ||

nānā duṣkaøtaphalava uṇḍe innāre śrīnivāsa

endū durviṣayake mana eragadante māḍo śrīnivāsa || 2 ||

satkathā śravaṇa bhāgyava koḍu anudina śrīnivāsa

ennahr̥tkamaladi vyaktanāgayya śrīnivāsa || 3 ||

putra kaḷatra mitraru ninna dāsaro śrīnivāsa

tvadbhatya bhr̥tyara paricāraka nānu śrīnivāsa || 4 ||

ananta janmada satkarma ninagēve śrīnivāsa

nitya dīnōd’dhāra prasannaveṅkaṭa mukunda śrīnivāsa || 5 ||
***