Showing posts with label ಮಾಮಝ ಭಾಪುರೆ ಭಳಿರೆ ಹನುಮಂತ purandara vittala MAAMUJHA BHAAPURE BHALIRE HANUMANTA. Show all posts
Showing posts with label ಮಾಮಝ ಭಾಪುರೆ ಭಳಿರೆ ಹನುಮಂತ purandara vittala MAAMUJHA BHAAPURE BHALIRE HANUMANTA. Show all posts

Monday, 6 December 2021

ಮಾಮಝ ಭಾಪುರೆ ಭಳಿರೆ ಹನುಮಂತ purandara vittala MAAMUJHA BHAAPURE BHALIRE HANUMANTA



ಪುರಂದರದಾಸರು
ಮಾಮಝ ಭಾಪುರೆ ಭಳಿರೆ ಹನುಮಂತ
ರಾಮಪದ ಸೇವಿಪ ವೀರ ಹನುಮಂತ ಪ

ಹುಟ್ಟುತಲೆ ಹೊನ್ನ ಕಚ್ಚುಟವ ಕುಂಡಲವೆರಸಿ
ನಿಷ್ಠೆಯಲಿ ರಘುಪತಿಯ ಪಾದವನೆ ಕಂಡು ||
ದಿಟ್ಟಿ ಹರಿದಾಡಿ ಮನಮುಟ್ಟಿ ಪೂಜಿಸಲಜನ
ಪಟ್ಟಕನುವಾದ ಸಿರಿವಂತ ಹನುಮಂತ 1

ಅಂಬರಕೆ ಪುಟನೆಗೆದು ಅಂಬುಧಿಯ ನೆರೆ ದಾಟಿ
ಕುಂಭಿನಿಯ ಮಗಳಿಗುಂಗುರವನಿತ್ತು |
ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆ
ಗಂಭೀರ ವೀರಾಧಿವೀರ ಹನುಮಂತ 2

ಅತಿದುರಳ ರಕ್ಕಸನು ರಥದ ಮೇಲಿರಲು ರಘು-
ಪತಿಯು ಪದಚರಿಯಾಗಿ ನಿಂತಿರಲು ನೋಡಿ ||
ಪೃಥವಿ- ಗಗನಕೆ ಬೆಳೆದು ರಥವಾದೆ ಒಡೆಯನಿಗೆ
ಅತಿ ಭಯಂಕರ ಸತ್ತ್ವವಂತ ಹನುಮಂತ 3

ಒಡೆಯ ಉಣಕರೆಯಲಂದಡಿಗಡಿಗೆ ಕೈಮುಗಿದು
ದೃಢಭಕ್ತಿಯಿಂದ ಮೌನದಿ ಕುಳಿತು ||
ಎಡಿಯಕೊಂಡೆದ್ದೋಡಿ ಗಗನದಿ ಸುರರಿಗೆ
ಕೊಡುತ ಸವಿದುಂಡ ಗುಣವಂತ ಹನುಮಂತ4

ಪ್ರಥಮದಲಿ ಹನುಮಂತ ದ್ವಿತೀಯದಲಿ ಕಲಿಭೀಮ
ತೃತೀಯದಲಿ ಗುರು ಮಧ್ವಮುನಿಯೆನಿಸೀ ||
ಪ್ರತಿಯಿಲ್ಲದಲೆ ಮೆರೆದೆ ಪುರಂದರ ವಿಠಲನ
ಸುತ್ತ ನಿನಗಾರು ಸರಿ - ವಿಜಯ ಹನುಮಂತ 5
**********


ಮಾಮಝ ಭಾಪುರೆ ಭಳಿರೆ ಹನುಮಂತ ರಾಮಪದ ಸೇವಿಪ  

ವೀರ ಹನುಮಂತ ಪಹುಟ್ಟುತಲೆ ಹೊನ್ನ ಕಚ್ಚುಟವ ಕುಂಡಲವೆರಸಿನಿಷ್ಠೆಯಲಿ ರಘುಪತಿಯ ಪಾದವನೆ ಕಂಡು ||ದಿಟ್ಟಿ ಹರಿದಾಡಿ ಮನಮುಟ್ಟಿ ಪೂಜಿಸಲಜನಪಟ್ಟಕನುವಾದ ಸಿರಿವಂತ ಹನುಮಂತ 1

ಅಂಬರಕೆ ಪುಟನೆಗೆದು ಅಂಬುಧಿಯನೆರೆದಾಟಿಕುಂಭಿನಿಯ ಮಗಳಿಗುಂಗುರವನಿತ್ತು |ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆಗಂಭೀರ ವೀರಾಧಿವೀರ ಹನುಮಂತ 2

ಅತಿದುರಳ ರಕ್ಕಸನು ರಥದ ಮೇಲಿರಲು ರಘು-ಪತಿಯು ಪದಚರಿಯಾಗಿ ನಿಂತಿರಲು ನೋಡಿ ||ಪೃಥವಿ- ಗಗನಕೆ ಬೆಳೆದು ರಥವಾದೆ ಒಡೆಯನಿಗೆಅತಿ ಭಯಂಕರ ಸತ್ತ್ವವಂತ ಹನುಮಂತ 3
**********


ಒಡೆಯ ಉಣಕರೆಯಲಂದಡಿಗಡಿಗೆ ಕೈಮುಗಿದುದೃಢಭಕ್ತಿಯಿಂದ ಮೌನದಿ ಕುಳಿತು ||ಎಡಿಯಕೊಂಡೆದ್ದೋಡಿ ಗಗನದಿ ಸುರರಿಗೆಕೊಡುತ ಸವಿದುಂಡ ಗುಣವಂತ ಹನುಮಂತ 4

ಪ್ರಥಮದಲಿ ಹನುಮಂತ ದ್ವಿತೀಯದಲಿ ಕಲಿಭೀಮತೃತೀಯದಲಿಗುರುಮಧ್ವಮುನಿಯೆನಿಸೀ ||ಪ್ರತಿಯಿಲ್ಲದಲೆ ಮೆರೆದೆಪುರಂದರವಿಠಲನಸುತ್ತ ನಿನಗಾರು ಸರಿ -ವಿಜಯಹನುಮಂತ5
********