Showing posts with label ಭಾಸ್ಕರ ಗುರುವರ ಮಗುಟ ವಿಶ್ವದೊಳೊಬ್ಬರೆ mahipati. Show all posts
Showing posts with label ಭಾಸ್ಕರ ಗುರುವರ ಮಗುಟ ವಿಶ್ವದೊಳೊಬ್ಬರೆ mahipati. Show all posts

Wednesday, 11 December 2019

ಭಾಸ್ಕರ ಗುರುವರ ಮಗುಟ ವಿಶ್ವದೊಳೊಬ್ಬರೆ ankita mahipati

by ಮಹೀಪತಿದಾಸರು
ರಾಗ-ಹಂಸಧ್ವನಿ ತಾಳ-ದಾದರಾ

ಭಾಸ್ಕರಗುರುವರ ಮಗುಟ ವಿಶ್ವದೊಳೊಬ್ಬರೆ ಪ್ರಗಟ
ಭಾಸ್ಕರಗುರುದಯನೋಟ ರಸಕಾಯ ಸವಿದುಂಬೂಟ ||ಪ||

ಭಾಸ್ಕರಗುರು ನಿಜದೆಯ ಲೇಸುದೋರುವ ವಿಜಯ
ಭಾಸ್ಕರಗುರು ಅಭಯ ಹಸನಾದ ಪುಣ್ಯೋದಯ ||೧||

ಭಾಸ್ಕರ ಕರುಣಾಕಟಾಕ್ಷ ಭಾಸುದು ಘನ ಪ್ರತ್ಯಕ್ಷ
ಭಾಸ್ಕರಗುರು ನಿಜಭಿಕ್ಷ ಹಸನಾಗಿ ಮಾಡುವಾ ಸಂರಕ್ಷ ||೨||

ಭಾಸ್ಕರಗುರು ನಿಜಬೋಧ ಭಾಸುವ ಘನಸರ್ವದಾ
ಭಾಸ್ಕರಗುರು ಪ್ರಸಾದ ಸ್ವಸುಖದೋರುವ ಸಂವಿಸ್ವಾದ ||೩||

ಭಾಸ್ಕರಗುರು ಉಪದೇಶ ಭಾಸುವ ಬಲು ಸಂತೋಷ
ಭಾಸ್ಕರಗುರುವರೇಶ ಈಶನಹುದೊ ಸರ್ವೇಶ ||೪||

ಭಾಸ್ಕರಗುರುಕೃಪೆ ಜ್ಞಾನ ಲೇಸಾಗಿ ತೋರುವದುನ್ಮನ
ಭಾಸ್ಕರಗುರು ದಯಕರುಣ ದಾಸಮಹಿಪತಿಗಾಭರಣ ||೫||
*******