RAO COLLECTIONS SONGS refer remember refresh render DEVARANAMA
ದಯದೊಲವಿನ ಮೆಚ್ಚು pa
ಮಾಡದ ಮಾಡಿಸಿತು ನೋಡಿದರೇನ ತಾಂ ನೋಡಿಸಿತು ಕೂಡದ ಕೂಡಿಸಿತು ಬಿಡದಾಗಿಹ್ಯದ ಬಿಡಿಸಿತು 1
ತನ್ನ ತಾನರಸಿತು ಇನ್ನೊಂದರನೆ ಮರೆಸಿತು ಭಿನ್ನ ಭೇದ್ಹರಿಸಿತು ಚಿನ್ಮಯದ ಸುಖ ಬೆರೆಸಿತು 2
ಕಾಣದ ಕಾಣಿಸಿತು ಉಣದೂಟನೆÀ ತಾ ಉಣಿಸಿತು ಅನುಮಾನಗಳಿಸಿತು ಘನ ಮಹಿಪತಿಗೆ ನುಡಿಸಿತು 3
***