Showing posts with label ತಪ್ಪು ಕ್ಷಮೆ ಮಾಡೋ ಕೃಪೆಯಿಂದ ನೋಡೋ gurumahipati TAPPU KSHAME MAADO KRUPEYINDA NODO. Show all posts
Showing posts with label ತಪ್ಪು ಕ್ಷಮೆ ಮಾಡೋ ಕೃಪೆಯಿಂದ ನೋಡೋ gurumahipati TAPPU KSHAME MAADO KRUPEYINDA NODO. Show all posts

Thursday, 2 December 2021

ತಪ್ಪು ಕ್ಷಮೆ ಮಾಡೋ ಕೃಪೆಯಿಂದ ನೋಡೋ ankita gurumahipati TAPPU KSHAME MAADO KRUPEYINDA NODO

 


ಕಾಖಂಡಕಿ ಶ್ರೀ ಕೃಷ್ಣದಾಸರು

ತಪ್ಪು ಕ್ಷಮೆ ಮಾಡೊ ಕೃಪೆಯಿಂದ ನೋಡೊ ಪ  


ನೀನೆ ದಯಾನಿಧಿ ನಾನೆ ಅಪರಾಧಿ ಖೂನ ದೋರು ಹಾದಿ ಸ್ಥಾನ ನಿಜಗಾದಿ 1

 

ಅನಾಥನೆಂದು ನೋಡಿ ಸುನಾಥ ಎನ್ನ ಮಾಡಿ ಸ್ವಾನಂದ ಸುಖ ನೀಡಿ ಮನ್ನಾಥ ನಿಜಗೂಡಿ 2 


ಹೆಳಲಾರೆ ಬಹಳ ಕೇಳೋ ನೀ ದಯಾಳ ತಾಳಿ ಎನ್ನ ತೋಳ ಬಾಳ ವಿಶ್ವಪಾಲ 3

 

ಸೇವೆ ಇದೆ ನಮ್ಮ ಭಾವಿಸುದು ನಿಮ್ಮ ಪಾವನಗೈಸು ವರ್ಮ ಸುವಿದ್ಯ ಪರಬ್ರಹ್ಮ 4 


ಬಂದ ಮ್ಯಾಲೆ ಶರಣಕುಂದಬ್ಯಾಕೊ ಪೂರ್ಣ ಕಂದ ಮಹಿಪತಿ ಗುಣ ಚಂದಮಾಡೊ ಕರುಣ 5

****


ತಪ್ಪು ಕ್ಷಮೆ ಮಾಡೋ ಕೃಪೆಯಿಂದ ನೋಡೋ ಪ 


ನೀನೆದಯಾನಿಧಿ ನಾನು ಅಪರಾದಿ ಖೂನದೋರೋ ಹಾದಿ ಸ್ಥಾನ ನಿಜಾನಾದಿ 1 

ಅನಾಥನೆಂದು ನೋಡಿ ಸುನಾಥನೆನ್ನಮಾಡಿ ಸ್ವಾನಂದ ಸುಖನೀಡಿ ಮನ್ನಾಥ ನಿಜಗೂಡಿ2 

ಹೇಳಲಾರೆ ಬಹಳಾ ಕೇಳೋನೀದಯಾಳಾ ತಾಳಿಯನ್ನ ತೋಲಾಬಾಲವಿಶ್ವಷಾಲಾ 3 

ಸೇವಿ ಇದೇನಮ್ಮ ಭಾವಿಸುದು ನಿಮ್ಮ ಪಾವನ್ನಗೈಸು ವರ್ಮಾ ಸುನಿತ್ಯ ಪರಬ್ರಹ್ಮಾ 4 

ಬಂದ ಮ್ಯಾಲೆ ಶರಣಾ ಕುಂದವ್ಯಾಕೋ ಪೂರ್ಣ ಕಂದ ಮಹಿಪತಿಗುಣಾ ಛಂದ ಮಾಡೋಕರುಣಾ 5

***