ಕ್ಷೋಣಿಯೊಳು ಸರ್ವಪುರಾಣಜ್ಞಸೂತರು
ಶೌನಕಾದಿ ಮುನಿಗಳಿಗೆ
ಶ್ರೀನಿವಾಸನ ಪದ ಧ್ಯಾನಿಸಿ ಸತ್ಕಥೆ
ಸಾನುರಾಗದಲಿ ಪೇಳಿದರು 1
ಕಾಳಿರಮಣ ಚಂದ್ರ ಮೌಳಿಗೆ ಮನೆಯೆಂದು
ಕೈಲಾಸಶಿಖರ ಮೆರೆವುದು
ಪೇಳಲಳವೆ ಇಂದ್ರನೀಲ ಮಾಣಿಕ್ಯಾದಿ
ಮೇಲಾದ ರತ್ನಕಾಂತಿಗಳಿಂ2
ಚೂತ ಚಂಪಕ ಪಾರಿಚಾತ ಬಕುಲ
ಜಂಬುಕೇತಕಿ ಪನಸ ಪುನ್ನಾಗ
ಖ್ಯಾತವಾದ ತರುವ್ರಾತಗಳಿಂದ
ಸರ್ವಾತಿಶಯದಲಿ ತೋರುವದು 3
ಸಿದ್ಧ ಚಾರಣ ತಪೋವೃದ್ಧರಿದೇ ಸ್ಥಳ
ಸಿದ್ಧಿದಾಯಕ ವೆಂದಿಲ್ಲಿ
ಹೃದ್ಗುಹದಲ್ಲಿ ಗೋವರ್ಧನ ಧರನಂಘ್ರಿ
ಪದಧ್ಯಾನದಿ ಕುಳಿತಿಹರು 4
ಪವನಸಂಯುತಮಾಗಿ ದಿವಿಜ ಶೇವಿತ ಮಾಗಿ
ಅವನಿಧರಾಗ್ರಣಿಯಾಗಿ
ಭುವನೋದರತ್ವದಿ ಭುವನಜನಾಭ ಶ್ರೀಧವನಂತೆ
ಗಿರಿಯು ಮೆರೆಯುವುದು5
ಭಾಸುರ ರತ್ನಸಿಂಹಾಸನದಲಿ ಪರಮೇಶ್ವರ
ಪಾರ್ವತಿಯೊಡನೆ
ತೋಷದಿ ಕುಳಿತಿರಲಾ ಸಮಯದಿ ಸತಿ ಈಶಗೆ
ನಮಿಸಿ ನುಡಿದಳು 6
ಲೋಕಕ್ಕೆ ಹಿತವಾಗಬೇಕೆಂದು ಸತಿಯು ಪಿನಾಕಿಗೆ
ನುಡಿಯ ಲಾಕ್ಷಣದಿ
ಏಕಮನದಿ ಸರ್ವಲೋಕಮಾತೆಯವೃತ
ನಾಕರುಣಿಸುವೆ ಕೇಳೆಂದ7
ಧರೆಯೊಳು ಕಾಮಿತ ವರಗಳ ನೀಡುವ
ವರಮಹಾಲಕ್ಷ್ಮಿಯ ವೃತವು
ಪರಮ ಭಕುತಿಯಿಂದಾಚರಿಸಿದ ಕ್ಷಣದೊಳು
ದೊರೆವುದು ಸಕಲಸೌಭಾಗ್ಯ 8
ಮಾಸ ಶ್ರಾವಣ ಶುಕ್ರ ವಾಸರಯುತ
ಪೂರ್ಣ ಮಾಸಿಯ ದಿನದಿ ಪೂಜಿಪದು
ಭೂಸುರವರ್ಯ ಸುವಾಸಿನಿಯರನು
ವಿಶ್ವಾಸದಿಂದಾರಾಧಿಸುತಲಿ 9
ಸಣ್ಣಶ್ಯಾವಿಗೆ ಪರಮಾನ್ನ ಭಕ್ಷಾದಿ
ಪಕ್ವಾನ್ನ ಲೇಹ್ಯಾದಿ ನೈವೇದ್ಯ
ಚಿನ್ನದ್ಹರಿವಾಣದಿ ಚನ್ನಾಗಿ ಬಡಿಸಿ
ತತ್ತನ್ನಿಯಾಮಕರ ಚಿಂತಿಪುದು 10
ಧೂಪ ದೀಪಾದಿ ಸರ್ವೋಪಚಾರದಲಿ
ಕೃಪಾಪಯೋನಿಧೆಯ ಪೂಜಿಪುದು
ಕೋಪಧೂಪವು e್ಞÁನದೀಪಗಳಿಂದ
ಬಿಂಬಾಪರೋಕ್ಷಿಗಳು ಪೂಜಿಪರು 11
ಭೂಮಿ ಯೊಳೀವೃತ ನೇಮದಿಂದಲಿ ಮಾಡಿ
ಕಾಮಿತ ಪಡೆದವರ್ಯಾರು
ಸೋಮ ಶೇಖರನೆ ಪೇಳೀ ಮಹಾವೃತದ
ಮಹಾಮಹಿಮೆಯನು ಚನ್ನಾಗಿ12
ಧರೆಯೊಳು ಕುಂಡಿನ ಪುರದೊಳಗೊಬ್ಬ ಭೂಸುರನ
ಮಡದಿ ತಾನಿರಲು
ಸರಸಿಜಾಂಬಕಿಯ ಪೆಸರು ಚಾರುಮತಿಯೆಂದು
ಕರೆಯುವರೆಲ್ಲಾರು ಪುರದಿ 13
ಅನುದಿನದಲಿ ಗುರುಜನರ ಶೇವಿಸುವದೆ
ವನಜನಾಭನ ಶೇವೆಯೆಂದು
ಇನಿಯನ ನುಡಿಗಳಿಗನುಸರಿಸುತ ಭಹು ವಿನಯಾದಿ
ಗುಣದಿ ಭೂಷಿತಳು 14
ನಂದದಿ ಮಲಗಿರಲೊಂದಿನ ಸ್ವಪ್ನದಿ
ಬಂದಳು ವರಮಹಾಲಕ್ಷ್ಮಿ
ಸುಂದರಿ ವರವ ಬೇಡೆಂದು ನುಡಿಯೆ ಪದಕೊಂದಿಸಿ
ಪರಮ ಸಂಭ್ರಮದಿ 15
ಸಿರಿದೇವಿ ನಿನ್ನಯ ಕರುಣದಿ ಬ್ರಹ್ಮನು
ನಿರ್ಮಿಸುವನು ಜಗವೆಲ್ಲ
ಪರಮಧನ್ಯಳಾದೆ ದರುಶನದಿಂದಘತರಿದು
ನೀ ಕರುಣಿಸು ಮಾತೆ 16
ಬರಲು ಶ್ರಾವಣ ಶುಕ್ರವಾರ ಪೂರ್ಣಮಿ
ಹರುಷದಿಂದೆನ್ನಯ ವೃತವ
ಚರಿಸಿದಾಕ್ಷಣದೊಳು ಗರಿವೆ ಸಂಪದವೆಂದು
ವರಗಳನಿತ್ತಳು ದಯದಿ 17
ಇಂತಾದ ಸ್ವಪ್ನ ವೃತ್ತಾಂತ ಸ್ವಜನಕತಿ
ಸಂತೋಷದಲಿ ಪೇಳಲವರು
ಇಂತು ನುಡಿದರು ನಿಶಾಂತದಿ ಸ್ವಪ್ನವು
ಚಿಂತಿತ ಫಲವೀವುದೆಂದು 18
ರಂಗವಲ್ಯಾದಿ ಚಿತ್ರಗಳಿಂದಲಿ ಮನಿ
ಸಿಂಗರಿಸಿದಳಾದಿನದಿ
ಅಂಗನೆ ಮಿಂದುಟ್ಟು ಶೃಂಗಾರದಿಂದ
ವಿಪ್ರಾಂಗನೆಯರನು ಕರೆದಳು 19
ಕರೆಯ ಲಾಕ್ಷಣದಲ್ಲಿ ಪುರದ ನಾರಿಯರೆಲ್ಲ
ಶಿರಿದೇವಿ ಪೂಜಾಸಾಧನವ
ಧರಿಸುತ ಕರದೊಳು ಹರುಷದಿಂದಲಿ ಬಂದು
ನೆರೆದರಾ ದ್ವಿಜನಮಂದಿರದಿ 20
ಅಂಬುಜಮುಖಿಯರು ಸಂಭ್ರಮದಲಿ ಪೂರ್ಣ
ಕುಂಭಗಳಿಟ್ಟಘ್ರ್ಯಾದಿಗಳಿಂ
ಅಂಬುಧಿಸುತೆಯ ಪಾದಾಂಬುಜ ಪೂಜಿಸೆ ಕುಂಬಿಣಿ
ಸುರರ ಸಮ್ಮುಖದಿ 21
ಇಂದು ವದನೆಯರಾನಂದದಿ ಪಾಡುತ
ಇಂದಿರ ದೇವಿಗಾರುತಿಯ
ತಂದು ಬೆಳಗಿದರು ಛಂದದಿಂದಲಿ ದೋರು
ಬಂಧÀ£ವÀನÉ ಮಾಡುತಿಹರು 22
ರಾಜಮುಖಿಯು ಸರ್ವರಾಜೋಪಚಾರದಿ
ಪೂಜಿಸುತಿರಲಾಗೃಹವು
ರಾಜಿಸುತಿರೆ ಸುರರಾಜ ಭವನದಂತೆ
ಸೋಜಿಗವಾಯ್ತು ನೋಳ್ಪರಿಗೆ 23
ಸ್ವರ್ಣಮಯಾಂಬರ ಚರಣದಿ ನೂಪುರ
ಕೊರಳೊಳುನವರತ್ನಹಾರ
ಪರಿಶೋಭಿಸಲು ಕಂಡು ಬೆರಗಾದಳಂಗನೆ
ಸಿರಿದೇವಿ ಕರುಣವಿದೆಂದು 24
ಮುತ್ತೈದೆಯರು ಭೂಸುರೋತ್ತಮರಿಗೆಲ್ಲ
ಇತ್ತರು ಬಾಗಿಣಗಳನು
ಭಕ್ತಿಯಿಂದೆಲ್ಲರು ಚಿತ್ತದಿ ಹರುಷ ಬಡುತ್ತ
ಪೋದರು ತಮ್ಮ ಮನೆಗೆ 25
ಧನ್ಯಳು ಸುಗುಣ ಸಂಪನ್ನೆ ಚಾರುಮತಿ
ಪುಣ್ಯದಿಂದೆಲ್ಲರು ನಾವೆಂ
ದನ್ಯೋನ್ಯ ನುಡಿಯುತ ಬಣ್ಣಿಸಿದರು
ಧನಧಾನ್ಯ ಸಂಪದಾಗಮನ 26
ಈ ಲಕುಮಿಯ ಕಥೆ ಹೇಳಿಕೇಳಿದರ
ಪಾಲಿಸುವಳು ಸಿರಿಯೆಂದು
ಶೈಲಕುಮಾರಿಗೆ ಕೈಲಾಸ ಶಿಖರದಿ ಪೇಳಿದ
ಶಿವನು ಹೀಗೆಂದು ||27|
ತೋಯಜಾಕ್ಷಿಯೆ ಕೇಳು ಗಾಯನಮಾಡಲು
ಕಾಯಜ ಜನನಿಯ
ಆಯುರಾರೋಗ್ಯ ಐಶ್ವರ್ಯಾದಿಗಳ ಕೊಟ್ಟು
ಕಾಯುವದೆಂದು ನೀ ತಿಳಿಯೆ 28
ಕಲಿಕೃತ ದೋಷವ ಕಳೆದು ಕೊಡುವ
ನಿರ್ಮಲ ಭಕ್ತಿe್ಞÁನ
ವೈರಾಗ್ಯ ಇಳೆಯೊಳು ಕಾರ್ಪರ ನಿಲಯ ಶ್ರೀನರಹರಿ
ಒಲಿವನು ನಿರುತ ಪಠಿಸಲು30
****