ಕರುಣಿಸೊ ಜಯರಾಯಾ ಗುರುವರ್ಯ
ಚರಣವೆ ಗತಿಯಯ್ಯ ಹೇ ಜಿಯಾ ಪ
ರಘುನಾಥನ ಪುತ್ರ ಪವಿತ್ರ
ರಾಘವನ ಪ್ರೀತಪ್ರಾತ್ರ ಚರಿತ್ರ
ಮಘವನಾ ನೀ ನಘದೂರ ಶ್ರೀ
ರಘುರಾಮನ ಕಿಂಕರನ ಅಮೋಘ ಸೇವಕನೊ 1
ಕುಕರ್ವಿಣಿಯ ತೀರಾ ಘೋರಕುವಾದಿಗಳ ಕು
ಲಕುಠಾರ ಗಂಭೀರ ಸಕಲಶಾಸ್ತ್ರಸತ್ಸಾರ ಟೀಕಕರ
ಕುಕವಿಶೃಗಾಲಕುಲಕಾಲಭಯಂಕರ 2
ಎರಗೋಳಾದ್ರಿಯೊಳು ಗುಹೆಯೊಳು
ನಿರುತ ಪ್ರವಚನಗಳು ನಿತ್ಯದೊಳು
ಮರುತಮತಾಂಬುಧಿಚಂದಿರ ಸುಂದರ
ವರಸುe್ಞÁನಮಣಿಕಿರಣವ ತೋರಿದೆ 3
ಗುರು ಮಧ್ವಮುನಿ ತತ್ತ್ವಗ್ರಂಥದ
ಕ್ಷೀರಶರಧಿಗೆ ಮಂಥಾ ವುನ್ನಂಥಾ
ಮರುತನನುಗ್ರಹ ಪ್ರಗ್ರಹದಿಂದಲಿ
ವರಮಥನದಿ ಇತ್ತೆ ಅಮೋಘವಸ್ತುಗಳೆಲ್ಲಾ4
ಉತ್ತಮ ಗ್ರಂಥವನಧೀ ಮಥನದಿ
ಉತ್ತಮ ವಸ್ತುಗಳನಿತ್ತೆಯೊ
ತತ್ತ್ವಪ್ರಕಾಶಿಕಾ ಮಹಾಲಕುಮಿಯು
ಚಂದಿರನೇ ಪ್ರಮೇಯದೀಪಿಕಾ
ಸುಧೆಯೇ ನ್ಯಾಯಸುಧಾಗ್ರಂಥ
ಶ್ರೀ ಕೌಸ್ತುಭದಂತಿಹ ನ್ಯಾಯದೀಪಿಕಾ 5
ನ್ಯಾಯ ಕಲ್ಪಲತಾ ಅಪ್ಸರರು ದುರುಳ ಮಾಯಾಖಂಡ
ನಾಯುಧವೂ ಸರ್ವಜೀಯನೆ ಐರಾವತದಂತೆ ಋ
ಗ್ಭಾಷ್ಯಟೀಕಾ ನ್ಯಾಯವಿವರಣವು ಉಚ್ಛೈಶ್ರವಸ್ಸು 6
ಕರ್ಮನಿರ್ಣಯ ಟೀಕಾ ವಜ್ರಾಯುಧ
ಆ ಮಹಾಪಾರಿಜಾತ ವಿಖ್ಯಾತಾ
ಶ್ರೀಮದ್ವಿಷ್ಣು ತತ್ತ್ವ ನಿರ್ಣಯ ಟೀಕೆಯು
ಕಲ್ಪವು ಉಪನಿಷತ್ ಭಾಷ್ಯ ಟೀಕೆಯು 7
ಈಶಾವಾಸ್ಯ ಭಾಷ್ಯ ಟೀಕಾ ಸಂತಾನವೆಂಬೋ ಮಹಾವೃಕ್ಷಾ ಪ್ರ
ತ್ಯಕ್ಷಾ ಬಿಸಜ ಮಂದಾರ ಪ್ರಮಾಣ ಪದ್ಧÀ್ದತಿ ಹರಿಚಂದನಕೆ
ಸಮನಾದ ವಾದಾವಳಿ 8
ಪಾಕಶಾಸನಾಂಶಾ ಕರುಣಿಸು
ಶ್ರೀಕರಪದಪಾಂಸ ಯತೀಶಾ
ನಾರ ಪತಿಯೆ ಶ್ರೀಕಾಗಿನೀ ತೀರದಿ
ಏಕಾಂತದಿ ನಿಂದೆ ಲೋಕ ವಂದಿತ ದೇವಾ 9
ಮಂದಭಾಗ್ಯಜನರಾ ಪರಮಾ
ನಂದದಿಂದಲಿ ನೋಡಿ ದಯಮಾಡಿ
ಬಂದ ಬಂಧಗಳ ವಂದಿಸಿದಾಕ್ಷಣ
ತಂದೆಯಂದದಿ ಕಾಯ್ದಾನಂದವೀವೆ ನಿತ್ಯಾ10
ಪರಮಪಾತಕಿ ನಾನು ಗುರುವೆ ತವ ಪಾ
ದ ರಕ್ಷಕವಚವ ತೊಡಿಸೊ ಉಳಿಸೋ
ನಿರುತ ಶರಣರ ಕಾಯ್ವ ಶ್ರೀ ವೆಂಕಟೇಶನ ಪ್ರೀಯಾಉರಗಾದ್ರಿವಾಸವಿಠಲನ ದಾಸಾ 11
****