ಪುರಂದರದಾಸರು
ಸೈಸಲಾರೆನೆ ಗೋಪಿ ನಿನ್ನ ಮಗನ ಲೂಟಿ |ಏಸೆಂದು ಪೇಳಲಮ್ಮ ||ವಾಸುದೇವನು ಬಂದು ಮೋಸದಿಂದಲಿ ಎನ್ನ |ವಾಸವಸೆಳಕೊಂಡು ಓಡಿ ಪೋದನಮ್ಮಪ
ದೇವರ ಪೆಟ್ಟಿಗೆ ತೆಗೆದು ಸಾಲಿಗ್ರಾಮ |ಸಾವಿರ ನುಂಗುವನೆ ||ಭಾವಜನಯ್ಯಇದೇನೆಂದರೆ ನಿಮ್ಮ |ಕಾಮದೇವರು ನಾನು ಕೇಳಿಕೊ ಎಂಬನೆ 1
ಅಗ್ರೋದಕತಂದು ಜಗುಲಿ ಮೇಲಿಟ್ಟರೆ |ವೆಗ್ಗಳದಲಿ ಕುಡಿವ ||ಮಂಗಳ ಮಹಿಮನ ವಿೂಸಲೆಂದರೆ ನಿಮ್ಮ |ಮಂಗಳಮಹಿಮನ ಅಪ್ಪನಾನೆಂಬುವ 2
ಅಟ್ಟಡಿಗೆಯನೆಲ್ಲ ಉಚ್ಛಿಷ್ಟವ ಮಾಡಿ |ಅಷ್ಟು ತಾ ಬಳಿದುಂಬನೆ ||ವಿಷ್ಣು ದೇವರ ನೈವೇದ್ಯವೆಂದರೆ ನಿಮ್ಮ |ಇಷ್ಟದೇವರು ತೃಪ್ತನಾದನೆಂತೆಂಬುವ 3
ಋತುವಾದ ಬಾಲೆಯರು ಪತಿಯೆಡೆ ಪೋಪಾಗ |ಕೃತಕದಿಂದಡಗಿಹನೆ ||ಮತಿಗೆಟ್ಟ ಪೆಣ್ಣೆ ಸುಂಕವ ಕೊಡು ಎನುತಲಿ |ಪ್ರತಿಯಾಗಿ ಮಾರನ ಸೂರೆಗೊಂಬುವನೆ 4
ಅಚ್ಚಪಾಲು-ಮೊಸರುನವನೀತಮಜ್ಜಿಗೆ |ರಚ್ಚೆಮಾಡಿ ಕುಡಿವ ||ಅಚ್ಚ ಪುರಂದರವಿಠಲರಾಯನ |ಇಚ್ಛೆಯಿಂದಲಿ ನಿಮ್ಮ ಮನೆಗೆ ಕರೆದುಕೊಳ್ಳಿ 5
********