ಕಾಖಂಡಕಿ ಶ್ರೀ ಮಹಿಪತಿರಾಯರು
ಅಲ್ಲೇ ನಿಲ್ಲೇನು | ಯೋಗಿಗೆ | ಅಲ್ಲೇ ನಿಲ್ಲೇನು ಪ
ಎಲ್ಲಿ ನೋಡಿದರಲ್ಲಿ ಘುಲ್ಲನಾಭನೇ ಇಹ | ಅಲ್ಲೇ ನೀಲ್ಲೇನು | ನಿಲ್ಲದ ಮನಸಿನ ಕಾಲಾಟ ಒದಗಿತು | ಅಲ್ಲೇ ನಿಲ್ಲೇನು 1
ನೀರೊಳಗಾನಂದಲ್ಯಾಡುವ ಮೀನಕ | ಅಲ್ಲೇ ನಿಲ್ಲೇನು | ಕಾನನ ತಿರುಗವ ಎರಳೆಗೆ | ಅಲ್ಲೇ ನಿಲ್ಲೇನು 2
ತಳಿತಿಹ ಬನದೊಳು ತಿರುಗುವ ಪಕ್ಷಿಗೆ | ಅಲ್ಲೇ ನಿಲ್ಲೇನು | ನೆನೆನುಡಿ ಸಾರಿದ ಮಹಿಪತಿ ನಂದನ | ಅಲ್ಲೇ ನಿಲ್ಲೇನು 3
***