ಆವ ಜನುಮದ ಪುಣ್ಯ ಫಲಿಸಿತೆನಗೆ |
ಈ ಉಡುಪಿ ಕೃಷ್ಣನ ಪ್ರಸಾದ ಭುಂಜಿಸಿದೆ || pa ||
ಲವಣವನು ಸವಿದುಣಲು ಜನುಮದಲ್ಲಿದ್ಧ |
ಭವರಾಶಿಗಳು ಹಾರಿ ಬಯಲಾದವು ||
ನವವಿಧದ ಭಕುತಿಯ ಮಾರ್ಗವನೆ ತಿಳಿದು ಮಾ |
ನವರೊಳಗೆ ಪರಿಶುದ್ಧನಾದೆ ಗುರು ಕರುಣದಲಿ || 1 | |
ಶಾಖಫಲ ಕೈಕೊಳಲು ಅರಿಷಡ್ವರ್ಗಗಳಿಂದ |
ಶೋಕವನು ಬಂದಿರಲು ಬೆನ್ನು ಬಿಟ್ಟು ||
ತಾಕೆಟ್ಟು ಪೋಗುವವು ಏನೆಂಬೆ ಸೋಜಿಗವು |
ಲೋಕದೊಳಗೆ ನಮ್ಮ ಕುಲ ಗೋತ್ರಜರೆ ಧನ್ಯ || 2 ||
ಸೂಪವನು ಉಂಡರೆ ಮುಂದಟ್ಟಿ ಬರುತ್ತಿಪ್ಪ |
ಆಪತ್ತು ಕಳವಳಿಸಿ ಹಿಂದಾದವು ||
ಭಾಪುರೇ ಮುಕ್ತಿ ಮಾರ್ಗಕ್ಕೆ ಬಲು ತೀವ್ರದಲಿ
ಸೋಪಾನ ದೊರಕಿದವು ತುತಿಸಲಳವೇ ಇಲ್ಲಿ || 3 ||
ಭಕ್ಷ್ಯಗಳು ಮೆಲಲಾಗಿ ಭಕ್ತಿ ಪುಟ್ಟುವದಯ್ಯಾ |
ಅಕ್ಷಯವಾಗುವದು ಇದ್ದ ಪುಣ್ಯ ||
ಅಕ್ಷರದಂತನಾಗಿ ಸರ್ವದಾಸರು ಉಂಟು |
ಮೋಕ್ಷಸಾಧನ ಮಾಳ್ಪ ಮನಸುಪುಟ್ಟಿತು ನೋಡಿ || 4 ||
ಓದನವ ಉದರದಲಿ ತುಂಬಲಾಕ್ಷಣದಲ್ಲಿ |
ಸಾಧುಗಳ ಸಂಗತಿ ಘಟಿಸುವದು ||
ಭೇದಾರ್ಥ ಜ್ಞಾನ ಬಂದೊದಗುವದು |
ಗುರು ಪೂರ್ಣಬೋಧರ ಮತದಲ್ಲಿ ಲೋಲಾಡುವಾನಂದಾ || 5 ||
ಘೃತ ದಧಿ ತಕ್ರ ಮೊದಲಾದ ವ್ಯಂಜನ ಉಣಲು |
ಹಿತವಾಗಿ ಸಕಲ ಇಂದ್ರಿಯಂಗಳು ||
ಸತತ ದುರ್ವಿಷಯಕ್ಕೆ ಪೋಗದಲೆ ಆವಾಗ |
ರತಿಪತಿಪಿತನ ಪದಸೇವೆಯೊಳಗಿಪ್ಪವೊ || 6||
ಕೃಷ್ಣ ಸಂದರುಶನ ಮೃಷ್ಟಾನ ಭೋಜನ |
ಕಷ್ಟನಾಶನ ಸರ್ವ ಕರ್ಮಕಧಿಕಾ ||
ಇಷ್ಟಾರ್ಥ ಸುಖಸೌಖ್ಯ ಮತ್ತಾವಲ್ಲಿ ಕಾಣೆ |
ಸೃಷ್ಟಿಗೊಡೆಯ ವಿಜಯ ವಿಠ್ಠಲನು ದಯವಾಗೆ || 7 ||
***
Āva janumada puṇya phalisitenage | ī uḍupi kr̥ṣṇana prasāda bhun̄jiside || pa ||
lavaṇavanu saviduṇalu janumadallid’dha | bhavarāśigaḷu hāri bayalādavu || navavidhada bhakutiya mārgavane tiḷidu mā | navaroḷage pariśud’dhanāde guru karuṇadali || 1 | |
śākhaphala kaikoḷalu ariṣaḍvargagaḷinda | śōkavanu bandiralu bennu biṭṭu || tākeṭṭu pōguvavu ēnembe sōjigavu | lōkadoḷage nam’ma kula gōtrajare dhan’ya || 2 ||
sūpavanu uṇḍare mundaṭṭi baruttippa | āpattu kaḷavaḷisi hindādavu || bhāpurē mukti mārgakke balu tīvradali sōpāna dorakidavu tutisalaḷavē illi || 3 ||
bhakṣyagaḷu melalāgi bhakti puṭṭuvadayyā | akṣayavāguvadu idda puṇya || akṣaradantanāgi sarvadāsaru uṇṭu | mōkṣasādhana māḷpa manasupuṭṭitu nōḍi || 4 ||
ōdanava udaradali tumbalākṣaṇadalli | sādhugaḷa saṅgati ghaṭisuvadu || bhēdārtha jñāna bandodaguvadu | guru pūrṇabōdhara matadalli lōlāḍuvānandā || 5 ||
ghr̥ta dadhi takra modalāda vyan̄jana uṇalu | hitavāgi sakala indriyaṅgaḷu || satata durviṣayakke pōgadale āvāga | ratipatipitana padasēveyoḷagippavo || 6||
kr̥ṣṇa sandaruśana mr̥ṣṭāna bhōjana | kaṣṭanāśana sarva karmakadhikā || iṣṭārtha sukhasaukhya mattāvalli kāṇe | sr̥ṣṭigoḍeya vijaya viṭhṭhalanu dayavāge || 7 ||
Plain English
Ava janumada punya phalisitenage | i udupi krsnana prasada bhunjiside || pa ||
lavanavanu savidunalu janumadallid’dha | bhavarasigalu hari bayaladavu || navavidhada bhakutiya margavane tilidu ma | navarolage parisud’dhanade guru karunadali || 1 | |
sakhaphala kaikolalu arisadvargagalinda | sokavanu bandiralu bennu battu || takettu poguvavu enembe sojigavu | lokadolage nam’ma kula gotrajare dhan’ya || 2 ||
supavanu undare mundatti baruttippa | apattu kalavalisi hindadavu || bhapure mukti margakke balu tivradali sopana dorakidavu tutisalalave illi || 3 ||
bhaksyagalu melalagi bhakti puttuvadayya | aksayavaguvadu idda punya || aksaradantanagi sarvadasaru untu | moksasadhana malpa manasuputtitu nodi || 4 ||
odanavu udaradali tumbalaksanadalli | sadhugala sangati ghatisuvadu || bhedartha jnana bandodaguvadu | guru purnabodhara matadalli loladuvananda || 5 ||
ghrta dadhi takra modalada vyanjana unalu | hitavagi sakala indriyangalu || satata durvisayakke pogadale avaga | ratipatipitana padaseveyolagippavo || 6||
krsna sandarusana mrstana bhojana | kastanasana sarva karmakadhika || istartha sukhasaukhya mattavalli kane | srstigodeya vijaya viththalanu dayavage || 7 ||
***