Showing posts with label ಅರಿತು ನಡೆಯಲು ಬೇಕು ನರಕಾಯವೆತ್ತಿದ ಮೇಲೆ neleyadikeshava. Show all posts
Showing posts with label ಅರಿತು ನಡೆಯಲು ಬೇಕು ನರಕಾಯವೆತ್ತಿದ ಮೇಲೆ neleyadikeshava. Show all posts

Wednesday, 16 October 2019

ಅರಿತು ನಡೆಯಲು ಬೇಕು ನರಕಾಯವೆತ್ತಿದ ಮೇಲೆ ankita neleyadikeshava

ರಾಗ :  ಮುಖಾರಿ   ತಾಳ : ಝಂಪೆ

ಅರಿತು ನಡೆಯಲು ಬೇಕು ನರಕಾಯವೆತ್ತಿದ ಮೇಲೆ 
ಅರಿಯದಿದ್ದರೆ ನರಕವೇ ಪ್ರಾಪ್ತಿ                        ।।ಪ।।

ದುರ್ಜನರ ಮನೆಯ ಪಾಯಸಾನ್ನಕಿಂತ 
ಸಜ್ಜನರ ಮನೆಯ ರಬ್ಬಳಿಗೆ ಲೇಸು 
ಹೆಜ್ಜೆಗೆ ಸಾವಿರಾರು ಹೊನ್ನನಿತ್ತರೂ ಬೇಡ ಬಲು 
ದುರ್ಜನರ ಸಂಗ ಬಲು ಭಂಗ ಹರಿಯೆ                ।।೧।।

ಭಕ್ತಿಹೀನರ ಮನೆಯ ಪಟ್ಟ ಸುಪ್ಪತಿಗೆಗಿಂತ 
ಭಕ್ತರ ಮನೆಯ ಕಡೆಬಾಗಿಲ ಕಾಯುವುದು ಲೇಸು 
ಮುಕ್ತಿ ಮಾರ್ಗವ ತೋರ್ಪ ಮುರಹರಣ ದಾಸರನು 
ಸಕ್ತಿಯಿಂ ಸೇವಿಸುವುದು ಬಲು ಸೌಖ್ಯ ಹರಿಯೆ           ।।೨।।

ಆಶೆಕಾರರ ಮನೆಯ ವಿಳಾಸ ಸುಖಕಿಂತ 
ಆಶಾರಹಿತರ ಮನೆಯ ನಿರ್ಗತಿಕ ದೈನ್ಯ ಲೇಸು 
ಭೂಸುರ ಪ್ರಿಯ ಕಾಗಿನೆಲೆಯಾದಿಕೇಶವನ 
ಮೀಸಲಿನ ಪಾದಭಜನೆ ಕಡುಲೇಸು ಮನವೆ             ।।೩।।
***


Aritu nadeyalu beku narakayavettida mele
Ariyadiddare narakave prapti ||pa||

Durjanara maneya payasannakinta
Sajjanara maneya rabbalige lesu
Hejjege saviraru honnanittaru beda balu
Durjanara sanga balu Banga hariye ||1||

Baktihinara maneya patta suppatigeginta
Baktara maneya kadebagila kayuvudu lesu
Mukti margava torpa muraharana dasaranu
Saktiyim sevisuvudu balu saukya hariye ||2||

Asekarara maneya vilasa sukakinta
Asarahitara maneya nirgatika dainya lesu
Busura priya kagineleyadikesavana
Misalina padabajane kadulesu manave ||3||
***