Showing posts with label ನೋಡು ಕರುಣದಿಂದ ಸರಸ್ವತೀ ನೀಡೆನೆಗೆ ಸುಮತೀ karpara narahari. Show all posts
Showing posts with label ನೋಡು ಕರುಣದಿಂದ ಸರಸ್ವತೀ ನೀಡೆನೆಗೆ ಸುಮತೀ karpara narahari. Show all posts

Saturday 1 May 2021

ನೋಡು ಕರುಣದಿಂದ ಸರಸ್ವತೀ ನೀಡೆನೆಗೆ ಸುಮತೀ ankita karpara narahari

 "  ಸರಸ್ವತೀ ದೇವಿಯರ ಸ್ತೋತ್ರ "

ರಾಗ : ಕಾಪಿ     ತಾಳ : ಏಕ


ನೋಡು ಕರುಣದಿಂದ ಸರಸ್ವತೀ ।

ನೀಡೆನೆಗೆ ಸುಮತೀ ।। ಪಲ್ಲವಿ ।।


ನೋಡು ಕರುಣದಿಂದ ಎನ್ನ ।

ಮೂಢ ಮತಿಯ ಕಳೆದು ಮನದಿ ।

ರೂಢೀಶ ಹರಿಯ ಗುಣಗಳನ್ನು ।

ಪಾಡಿ ಪೊಗಳುವಂತೆ ಎನ್ನ ।। ಅ ಪ ।।


ಮೃಡ ಇಂದ್ರಾದಿಗಳ 

ನಿಯಾಮಕಳೆ । ನಿ ।

ಮ್ಮಡಿಗಳಿಗೆರೆಗುವೆ ಮಾತೆ ।

ಕಡಲ ಶಯನನ ನಡಿಯುಗಳದಿ ।

ದೃಢ ಭಕುತಿಯ ಪಡೆವಂತೆ ।। ಚರಣ ।।


ಚತುರವಾದನನ ಸತಿಯ ಸಕಲ ।

ಶ್ರುತಿಗಳಿಗಭಿಮಾನಿ ನಿಮ್ಮನು ।

ನುತಿಸಿ ಬೇಡುವೆ ರತಿಯ ಪತಿಯ ।

ಪಿತನ ಮಹಿಮೆ ತುತಿಸುವಂತೆ ।। ಚರಣ ।।


ಸರಸಿಜಭವನರಸಿ ನಿಮ್ಮನು ।

ವರುಣಿಸಲೆನ್ನೊಶವೇ ಜನನಿ ।

ಶರಣ ಜನರ ಪೊರೆಯುವ । ಕಾ ।

ರ್ಪರ ನರಹರಿಯ ಸೊಸೆಯೇ ।। ಚರಣ ।।

****