Showing posts with label ಭದ್ರಾ ಮೂರುತಿ ನಿರ್ವಾತಾಂಹ್ವ jagannatha vittala. Show all posts
Showing posts with label ಭದ್ರಾ ಮೂರುತಿ ನಿರ್ವಾತಾಂಹ್ವ jagannatha vittala. Show all posts

Saturday, 14 December 2019

ಭದ್ರಾ ಮೂರುತಿ ನಿರ್ವಾತಾಂಹ್ವ ankita jagannatha vittala

ಜಗನ್ನಾಥದಾಸರು
ಭದ್ರಾ ಮೂರುತಿ ನಿರ್ವಾತಾಂಹ್ವ ಪ

ಹೃದ್ರೋಗ ಕಳೆದು e್ಞÁನಾದ್ರ್ರ ಸ್ವಾಂತನ ಮಾಡು
ಪದ್ರಾ ಸಾಮಗಾಘ ಸಮುದ್ರ ದಾಟಿಸಿ ಬೇಗ ಅ

ಏಸೇಸು ಕಲ್ಪಗಳಲ್ಲಿ ನಿನ್ನಾ
ದಾಸನೆಂದು ಎನ್ನ ಬಲ್ಲೀ ಈಶ ನೀನೆಂಬುದು
ಲೇಶವರಿಯೆ ಕ್ಲೇಶನಾಶನ ಪ್ರಭುವೆ ವಾರಾಶಿಜೆ ವಲ್ಲಭ
ವಾಸವಾನುಜ ವನಧಿಶಯನ ಮ
ಹೇಶವಂದಿತ ವರದ ಹೇ ಕರು
ಣಾ ಸಮುದ್ರ ಕರಾಳವದನನೆ ನೀ
ಸಲಹದಿರೆ ಕಾಣೆ ಕಾಯ್ವರ 1

ಹೇಮ ಕಶ್ಯಪು ತನ್ನ ಸುತನಾ ನೋಯಿಸೆ
ಶ್ರೀ ಮನೋಹರನೇ ಆನತನಾ
ವ್ಯೋಮ ಪರ್ವತಾಂಬುಧಿ ಧಾಮದೊಳುಳುಹಿದ
ಭೂಮ ಸನ್ಮುನಿ ಗಣಸ್ತೋಮ ವಂದಿತ ಪಾದ
ಸಾಮಜೇಂದ್ರನನರಸಿಯೊಳು ಸು
ತ್ರಾಮನಂದನನಾ ರಣದಿ ಕುರು
ಭೂಮಿಪತಿ ಸಭೆಯೊಳಗೆ ದ್ರೌಪದಿ
ಯಾ ಮಹಾತ್ಮರ ಕಾಯ್ದ ಕರುಣಿ 2

ವೇದಗಮ್ಯನೆ ವೇದ ವ್ಯಾಸ ಕಪಿಲ
ಯಾದವೇಶ ಮಹಿದಾಸ ಶ್ರೀದ ಶ್ರೀಶ ಅ
ನ್ನಾದಾ ಕಲ್ಕಿ ಧನ್ವಂತ್ರಿ ಮೇಧಾವಿ ಪತಿಯ ಏವ
ಷಾದರೋಗಂಗಳನಳಿದು ಮಹ
ದಾದಿದೇವ ಜಗನ್ನಾಥ ವಿಠ್ಠಲ ಆದರದಿ ಪ್ರಹ್ಲಾದವರ 3
*********