..
ನಮಿಸುವೆ ಪಾಲಿಸೊ ಪ್ರಾಣಪತೆ ಪ್ರೇಮವಾರುಧಿ |
ವಾನರನಾಥಾ ಪೊಂದಿದೆ ಚರಣಾ ಪ
ನೊಂದೆನು ಘೋರ ಭವದಿ ಪಾಶದಿ
ತಂದೆಯೆ ಪಿಡಿನೀ ಬಂದು
ಕರವ ಕುಂದಗಳೆಣಿಸದೆ ನೀ ಬೇಗನೆ 1
ಕರಿವರ ಭೀಮಾ ಗುರು ಸುಖತೀರ್ಥಮರಿಯದೆ ಗರಿಯೊ
ನರಹರಿ ಧ್ಯಾನಾ | ಕೊರವಿ ನಿಲಯನೆ ಪ್ರಾರ್ಥಿಪೆ 2
ಶ್ರೀವರ ಶಾಮಸುಂದರ ವಿಠಲನ ಸೇವಕನಾದ ಭಾವಿ
ಧಾತ ಪಾವನನೇ ಪವಿಗಾತ್ರ ಸದಾ 3
***