Wednesday, 1 September 2021

ನಮಿಸುವೆ ಪಾಲಿಸೊ ಪ್ರಾಣಪತೆ ಪ್ರೇಮವಾರುಧಿ ವಾನರನಾಥಾ ಪೊಂದಿದೆ ಚರಣಾ ankita shyamasundara

 ..

ನಮಿಸುವೆ ಪಾಲಿಸೊ ಪ್ರಾಣಪತೆ ಪ್ರೇಮವಾರುಧಿ |

ವಾನರನಾಥಾ ಪೊಂದಿದೆ ಚರಣಾ ಪ


ನೊಂದೆನು ಘೋರ ಭವದಿ ಪಾಶದಿ

ತಂದೆಯೆ ಪಿಡಿನೀ ಬಂದು

ಕರವ ಕುಂದಗಳೆಣಿಸದೆ ನೀ ಬೇಗನೆ 1


ಕರಿವರ ಭೀಮಾ ಗುರು ಸುಖತೀರ್ಥಮರಿಯದೆ ಗರಿಯೊ

ನರಹರಿ ಧ್ಯಾನಾ | ಕೊರವಿ ನಿಲಯನೆ ಪ್ರಾರ್ಥಿಪೆ 2


ಶ್ರೀವರ ಶಾಮಸುಂದರ ವಿಠಲನ ಸೇವಕನಾದ ಭಾವಿ

ಧಾತ ಪಾವನನೇ ಪವಿಗಾತ್ರ ಸದಾ 3

***


No comments:

Post a Comment