Wednesday, 1 September 2021

ನಂಬಿಭಜಿಸೊ ನಿರಂತರ ನೆರೆ ನಂಬಿ ಭಜಿಸಿ ಮನವೆ ankita shyamasundara

 ..

ನಂಬಿಭಜಿಸೊ ನಿರಂತರ | ನೆರೆ ನಂಬಿ ಭಜಿಸಿ ಮನವೆ ಪ


ಕುಂಭಿಣಿನಾಥ ದಾಸಾರ್ಯ | ಸಹ್ಲಾದರಾ | ಶಲ್ಯಾಖ್ಯರಾ ಅ.ಪ


ಆದಿಯುಗದಿ ಪ್ರಹ್ಲಾದನನುಜ | ಸಹ್ಲಾದನೆಂದೆನಿಸಿದರಾಯರ 1


ದ್ವಾಪರದಲ್ಲಿ ಶರಚಾಪಧಾರಿ | ಶಲ್ಯಭೂಪರೆನಿಸಿದ ರಾಯರು 2


ಪುರಂದರರಾರ್ಯರ ಪುಟ್ಟ ತರಳರೆನಿಸಿ

ಭಾವಿ ಮರುತರಾಜರ ಪ್ರೀಯ ದೂತರ 3


ಶೀಲ ಸುಜ್ಞಾನ ಮಹಿಮಶಾಲಿ ವಿಜಯಧೇನು

ಪಾಲದಾಸರ ದಯಷಾತ್ರರ 4


ಡಿಂಗರೀತಗಮರಾಂಘ್ರಿಪರೆನಿಸಿದ

ರಂಗವಲಿದ ಗುರುರಾಯರ 5


ದೀನಜನರಾಮರಧೇನುವೆಂದೆನಿಸಿದ ಮಾನವಿಕ್ಷೇತ್ರ ನಿವಾಸರ 6


ಶ್ರೀ ಶಾಮಸುಂದರನ ಭಾಸುರಕಥೆ | ಪೀಯೂಷ

ಬುಧರಿಗೆರೆದ ರಾಯರ 7

***


No comments:

Post a Comment