ನೀನನ್ನ ಹೇಳಬಾರದೇನ ತಾಯಿ
ನೀನನ್ನ ವಾನರ ವಂದಿತ ಶ್ರೀನಿವಾಸಗೆ ಬುದ್ಧಿ ಪ
ಶ್ರೀನಿಧಿ ಪರನೆಂದು ನಂಬಿ ಬಂದ ಬಡ
ಪ್ರಾಣಿಯ ಪೊರೆಯೆಂದು ಜಾನಕಿ ದೇವಿಯೆ 1
ಮೊರೆ ಹೊಕ್ಕವರ ಕರ ಪಿಡಿವೆನೆಂಬೊ ಘನಾ
ಬಿರುದು ಉಳಿಸಿಕೊ ಎಂದ್ಹರುಷದಿ ಸಿರಿದೇವಿ 2
ಉರಗಶಾಯಿ ಶಿರಿಗೋವಿಂದ ವಿಠಲ ತುರಗಗ್ರೀವ
ನರಹರಿಗೆ ತ್ವರಿತದಲಿ 3
****
by ಸಿರಿಗೋವಿಂದವಿಠಲ
ಲಕ್ಷ್ಮೀದೇವಿ
ನೀನನ್ನ ಹೇಳಬಾರದೇನೆ ತಾಯಿನಿನನ್ನವಾನರವಂದಿತ ಶ್ರೀನಿವಾಸಗೆ ಬುದ್ಧಿ ಪ
ಶ್ರೀನಿಧಿಪರನೆಂದು ನಂಬಿ ಬಂದ ಬಡಪ್ರಾಣಿಯ ಪೊರೆಯಂದು ಜಾನಕಿ ದೇವಿಯೇ 1
ಮೊರೆ ಹೊಕ್ಕವರಕರಪಿಡಿವನೆಂಬೊ ಘನಾಬರದು ಉಳಿಸಿಕೊ ಎಂದ್ಹರುಷದಿ ಸಿರಿದೇವಿ 2
ಉರಗಶಾಯಿ ಶಿರಿಗೋವಿಂದ ವಿಠಲ ತುರುಗಗ್ರೀವನರಹರಿಗೆ ತ್ವರಿತದಲ್ಲಿ 3
***