Showing posts with label ಒಳ್ಳೆ ವೀರನೆಂಬೊ ಮಾತು ಸುಳ್ಳು ಕೃಷ್ಣರಾಯ ramesha. Show all posts
Showing posts with label ಒಳ್ಳೆ ವೀರನೆಂಬೊ ಮಾತು ಸುಳ್ಳು ಕೃಷ್ಣರಾಯ ramesha. Show all posts

Sunday, 10 November 2019

ಒಳ್ಳೆ ವೀರನೆಂಬೊ ಮಾತು ಸುಳ್ಳು ಕೃಷ್ಣರಾಯ ankita ramesha

by ಗಲಗಲಿಅವ್ವನವರು
ಒಳ್ಳೆವೀರನೆಂಬೊ ಮಾತು ಸುಳ್ಳು ಕೃಷ್ಣರಾಯ
ಮೈಗಳ್ಳನೆಂದು ಕರೆಯೋರಲ್ಲೊ ಅಜರ್ಂುನರಾಯ ಪ.

ವೀರಮಾಗಧಯುದ್ಧಕ್ಕೆ ಬಾರೆಂದು ಕರೆಯಲು ಅಂಜಿನೀರೊಳಗೆ ಹೋಗಿ ಅಡಗಿದೆಯಲ್ಲೊ ಶ್ರೀಕೃಷ್ಣರಾಯ 1

ಯುದ್ಧ ಮಾಡುವೆನೆಂದು ಸನ್ನದ್ದನಾಗಿ ಬಂದು ಅಂಜಿಗುದ್ದುಹೊಕ್ಕೆಯಲ್ಲೊ ನೀನು ಅರ್ಜುನರಾಯ2

ಜರಿಯ ಸುತನು ಯುದ್ದದಲ್ಲಿ ಕರಿಯೆ ಅಂಜಿಕೊಂಡು ನೀನುಗಿರಿಯಮರೆಯಲ್ಲಡಗಿದೆಲ್ಲೊ ಶ್ರೀ ಕೃಷ್ಣರಾಯ 3

ಬಿಂಕದಿಂದ ಬಾಣ ಧರಿಸಿ ಶಂಕಿಸದೆ ಅಂಜಿ ಬಂದುಮಂಕು ಮನುಜರಂತೆ ನಿಂತ್ಯೊ ಅರ್ಜುನರಾಯ 4

ದೊರೆಯು ಮಾಗದ ಯುದ್ದಕ್ಕೆ ಬಾರÉಂದು ಕರೆದರೆ ಅಂಜಿವರಾಹನಾಗಿ ಓಡಿದೆಲ್ಲೊ ಶ್ರೀ ಕೃಷ್ಣರಾಯ 5

ಪೊಡವಿರಾಯರೆಲ್ಲ ಒಂದಾಗಿ ಬಿಡದೆ ಯುದ್ಧಮಾಡೆನೆಂಬೊಬಡಿವಾರವು ಎಷ್ಟು ನಿನಗೆ ಅರ್ಜುನರಾಯ 6

ಬಿಲ್ಲು ಧರಿಸಿ ಮಾಗಧನು ಬಿಲ್ಲಿಗೆ ಬಾ ಎಂದು ಕರಿಯೆಹಲ್ಲು ತೆರೆದು ಹೆದರಿಕೊಂಡ್ಯೊ ಶ್ರೀಕೃಷ್ಣರಾಯ 7

ಸಿಟ್ಟಿನಿಂದಕರ್ಣಬಾಣ ಬಿಟ್ಟನಯ್ಯ ನಿನ್ನ ಮ್ಯಾಲೆಕೊಟ್ಟಿಯಲ್ಲೊ ಮುಕುಟವನ್ನು ಅರ್ಜುನರಾಯ 8

ಹಲವುರಾಯರೆಲ್ಲ ನಿನ್ನ ನೆಲಿಯುಗಾಣದಂತೆÀ ಮಾಡೆಬಲಿಯ ಹೋಗಿ ಬೇಡಿದೆಲ್ಲೊ ಶ್ರೀ ಕೃಷ್ಣರಾಯ 9

ಕರ್ಣನ ಬಾಣವು ನಿನ್ನಹರಣಮಾಡಲೆಂದು ಬರಲುಮರಣ ತಪ್ಪಿಸಿದೆನಲ್ಲೊ ನಾನು ಅರ್ಜುನರಾಯ 10

ನಡವಕಟ್ಟಿ ವೈರಿಗಳ ಹೊಡೆಯಲಿಕ್ಕೆ ಅರಿವೊ ಕೃಷ್ಣಕಡಿಯಲಿಕ್ಕೆ ಜಾಣನಯ್ಯ ಶ್ರೀ ಕೃಷ್ಣರಾಯ 11

ಎಷ್ಟು ಗರ್ವದಿಂದ ದ್ವಿಜಗೆಕೊಟ್ಟೊ ಭಾಷೆ ಶಪಥ ಮಾಡಿನಷ್ಟವಾಯಿತಲ್ಲೊ ವಚನ ಅರ್ಜುನರಾಯ 12

ಎಲ್ಲ ವ್ಯಾಪ್ತಿ ಎಂಬೊ ಮಾತು ಎಲ್ಲಿದೆಯೊ ಈಗನಿನ್ನವಲ್ಲಭೆಯ ಒಯ್ದನ್ಹ್ಯಾಂಗೊ ಶ್ರೀಕೃಷ್ಣರಾಯ 13

ಧೀರಾಧೀರರೆಲ್ಲ ಕೂಡಿ ವೀರನೆಂದು ಪೊಗಳಲುನಾರಿಯ ಸೀರೆಯ ಹ್ಯಾಂಗ ಸೆಳಿದಾನಯ್ಯ ಅರ್ಜುನರಾಯ 14

ಶಂಭರಾರಿ ಪಿತನೆ ನಿನ್ನಜಂಬವೆಷ್ಟು ಕದ್ದುಕೊಂಡುತಿಂಬೋದಕ್ಕೆ ಜಾಣನಯ್ಯ ಶ್ರೀಕೃಷ್ಣರಾಯ 15

ಎಷ್ಟುಗರುವ ನಿಮ್ಮೆಲ್ಲರ ಅಷ್ಟಗುಣವ ನಾನ ಬಲ್ಲೆಹೊಟ್ಟೆಬಾಕ ಭೀಮನಯ್ಯ ಅರ್ಜುನರಾಯ 16

ಬತ್ತಲೆಂದು ನಗಲು ಜನರು ಮತ್ತೆನಾಚಿ ಕುದುರೆಯನ್ನುಹತ್ತಿಕೊಂಡು ಓಡಿದೆಲ್ಲೊ ಶ್ರೀ ಕೃಷ್ಣರಾಯ 17

ವ್ಯರ್ಥಕೈಪ ಧರಿಸಿ ಕನ್ಯೆ ಎತ್ತಿಕೊಂಡು ಒಯ್ದಮ್ಯಾಲೆಹತ್ತು ಜನರು ನಕ್ಕರಲ್ಲೊ ಅರ್ಜುನರಾಯ 18

ಕೃಷ್ಣಾರ್ಜುನರ ಈ ಸಂವಾದ ಸಂತುಷ್ಟನಾಗಿ ರಮಿ ಅರಸುಇಷ್ಟಾರ್ಥವ ಕೊಡಲಿ ನಮಗೆ ಶ್ರೀ ಕೃಷ್ಣರಾಯ 19
*******