kruti by ಗುರುಗೋವಿಂದಠಲ (ಮೈಸೂರು)
Guru Govinda vitthala daasaru (Mysore 1894-1983)
ಗುರುರಾಯರ ನಂಬಿರೋ ರಾಘವೇಂದ್ರ
ಗುರುರಾಯರ ನಂಬಿರೋ ಪ
ಗುರುರಾಯರ ನಂಬಿ ದುರಿತ ದುಷ್ಕøತ ಹರಿಸಿ
ಪುರುಷಾರ್ಥ ಪರಮವ ಕರಗತ ಕೈಗೊಳ್ಳಿ ಅ.ಪ.
ಪರಿಮಳೇತ್ಯಾದಿ ಸಂದ್ಗ್ರಂಥ ವಿರಚಿಸಿ
ವರಮೋಕ್ಷಪ್ರದವೆನಿಸುವಂಥ
ಎರಡೆರಡ್ಹತ್ತು ಮತ್ತೆ ಎರಡೈದು ಗ್ರಂಥವ
ಧರಣಿ ಸುರರಿಗಿತ್ತು ಕರುಣವ ತೋರಿದ 1
ರಾಮಕೃಷ್ಣ ನರಹರೀ ವೇದವ್ಯಾಸ
ಮಾಮನೋಹರ ವೃಂದಾವನದಿ
ವಾಮಾಂಗ ಎನಿಸೀಹ ಶ್ರೀಮಹಿಳೆಸಹಿತಾಗಿ
ಕಾಮಿತಾರ್ಥದ ಹರಿ ನೇಮದಿ ನೆಲಸೀಹ 2
ಕೂಸೆರಡರ ವಯದೀ ಮಂತ್ರಾಲಯ
ದೇಶಕೆ ಪೋಗಿ ಮುದದೀ
ಲೇಸು ಸೇವೆಯ ಗೈಯ್ಯೆ ಕಾಸರೋಗವನೀಗಿ
ಮೇಶ ಗುರುಗೋವಿಂದವಿಠಲನ ದಾಸನ್ನಾಗಿಸಿದ 3
***
ರಾಗ: [ಆನಂದಭೈರವಿ] ತಾಳ: [ಮಿಶ್ರನಡೆ] (raga tala may differ in audio)
Gururayara nambiro | raghavendragururayara nambiro || p ||
Guru rayara nambi durita dushkrata harisi | purushartha paramava karagata kaigolli || a.p.||
Parimaletyadi sandgrantha viracisi | paramochchaprada venisuvantha |
Erad erad hattu |matteradaidu granthava | dharani surarigittu karunava torida ||1||
Ramakrishna narahari | vedavyasa maamanohara vrundavanadi | vamanga enisiha srimahilesahitagi kamitarthada hari nemadi nelasiha || 2 ||
Kuseradara dayadi | mantralayadeshake pogi mudadi |l
lesu seveya gaiyye | kasarogavanigi mesha gurugovinda | dasannagisida ||3||
***
ಕೂಸೆರಡರ ವಯದೀ=ಶ್ರೀ ಗುರುಗೋವಿಂದ ದಾಸರ ತಾಯಿ ಮಂತ್ರಾಲಯದಲ್ಲಿ ರಾಯರ ಸೇವೆಗೈದಾಗ, ದಾಸರಿಗೆ 2 ವರ್ಷವಾಗಿತ್ತು-ವಿಷಮ ಜ್ವರ ನಿವಾರಣೆಯಾಗಿತ್ತು
***