Showing posts with label ವೃಂದಾವನದಲಿ ನಿಂತ ಸುಯತಿವರನ್ಯಾರೇ gurujagannatha vittala. Show all posts
Showing posts with label ವೃಂದಾವನದಲಿ ನಿಂತ ಸುಯತಿವರನ್ಯಾರೇ gurujagannatha vittala. Show all posts

Friday, 27 December 2019

ವೃಂದಾವನದಲಿ ನಿಂತ ಸುಯತಿವರನ್ಯಾರೇ ankita gurujagannatha vittala

by ಗುರುಜಗನ್ನಾಥದಾಸರು
ವೃಂದಾವನದಲಿ ನಿಂತ ಸುಯತಿವರನ್ಯಾರೇ ಪೆÉೀಳಮ್ಮಯ್ಯ ಪ

ವಂದಿಪ ಜನರಿಗೆ ನಂದ ಕೊಡುವೊ ರಾಘ -ವೇಂದ್ರ ಮುನಿವರನೀತ ನೋಡಮ್ಮ ಅ.ಪ

ಇಂದಿರೆ ರಮಣನ ಛಂದದಿ ಭಜಿಸ್ಯಾ-ನಂದದಲಿಹನ್ಯಾರೇ ಪೇಳಮ್ಮಯ್ಯಾನಂದತೀರ್ಥಮತ ಸಿಂಧುವರಕೆ ಬಾಲ -ಚಂದಿರನೆನಿಸಿಹನ್ಯಾರೇ ಪೇಳಮ್ಮಯ್ಯಮಂದಜನವಹರಿ ಕಂದುಗೊರಳರವೃಂದದಿ ಶೋಬಿಪನ್ಯಾರೆ ಪೇಳಮ್ಮಯ್ಯಹಿಂದೆ ವ್ಯಾಸಮುನಿ ಎಂದು ಕರೆಸಿದ ರಾಘ -ವೇಂದ್ರ ಗುರುವರ - ನೀತ ನೋಡಮ್ಮ 1

ನತಿಸುವ ಜನರಿಗೆ ಸತಿಸುತರನು ಬಲುಹಿತದಲಿ ನೀಡುವನ್ಯಾರೇ ಪೇಳಮ್ಮಯ್ಯಪ್ರತಿದಿನ ತನ್ನನು ಮತಿಪೂರ್ವಕ ಬಲುತುತಿಪರ ಪಾಲಿಪನ್ಯಾರೇ ಪೇಳಮ್ಮಯ್ಯಮತಿಯುತಪಂಡಿತ ತತಿಯಭಿಲಾಷವಸತತ ಪೂರ್ತಿಪನ್ಯಾರೇ ಪೇಳಮ್ಮಯ್ಯಕ್ಷಿತಿಸುರರಿಗೆ ಸದ್ಗತಿದಾಯಕ ಮಹಯತಿಕುಲವರ ಗುರುರಾಯ ಕಾಣಮ್ಮ 2

ಮಾತೆಯು ಸುತರಲಿ ಪ್ರೀತಿಗೊಳಿಸುವತಾತನ - ತೆರದಿಹನ್ಯಾರೇ ಪೇಳಮ್ಮಯ್ಯಪ್ರೇತನಾಥ ಮಹ ಭೂತಗಣಗಳಭೀತಿಯ ಬಿಡಿಸುವನ್ಯಾರೆ ಪೇಳಮ್ಮಯ್ಯಭೂತಳ ಜನಕೃತಪಾತಕಕಾನನವೀತಿಹೋತ್ರತೆರನ್ಯಾರೇ ಪೇಳಮ್ಮಯ್ಯದಾತಗುರು ಜಗನ್ನಾಥವಿಠಲ ನಿಜದೂತ ಜನಕ ಮಹದಾತನೀತಮ್ಮ 3
*******