Showing posts with label ಸದ್ಗುರು ಮೂರ್ತಿ ರಕ್ಷಿಸೋ ನೀನು ನಿನ್ನ ಪಾದವ ನಂಬಿದೆ ನಾನು bheemashankara. Show all posts
Showing posts with label ಸದ್ಗುರು ಮೂರ್ತಿ ರಕ್ಷಿಸೋ ನೀನು ನಿನ್ನ ಪಾದವ ನಂಬಿದೆ ನಾನು bheemashankara. Show all posts

Friday, 6 August 2021

ಸದ್ಗುರು ಮೂರ್ತಿ ರಕ್ಷಿಸೋ ನೀನು ನಿನ್ನ ಪಾದವ ನಂಬಿದೆ ನಾನು ankita bheemashankara

 ..

 kruti by ಭೀಮಾಶಂಕರರು ದಾಸರು bheemashankara


ಸದ್ಗುರು ಮೂರ್ತಿ ರಕ್ಷಿಸೋ ನೀನು |ನಿನ್ನ ಪಾದವ ನಂಬಿದೆ ನಾನು ಪ


ಪೂರ್ವಾರ್ಜಿತ ಪ್ರಾರಬ್ಧದಿಂದೆ |ತಾಯಿ ಉದರದಲಿ ನಾ ಬಂದೆ ||ಮಲಮೂತ್ರ ಜಠರಾಗ್ನಿಯಲಿ ನೊಂದೆ |ಒಂಬತ್ತು ತಿಂಗಳೊಳಗೆ ಬೆಂದೆ 1


ಬಾಲತ್ವದಲಿ ದುರ್ಬಲನಾದೆ |ಯೌವನ ಕಾಲಕೆ ಅಹಂಮತನಾದೆ ||ಮುಪ್ಪು ಬರಲು ಚಿಂತೆಯೊಳಗಾದೆ |ಸ್ವಾಮಿ ಭಜನೆಗೆ ಅಂತರನಾದೆ 2


ಧರೆಯೊಳಗೆ ದೊಡ್ಡವನೆಂದು |ಭವಭಯಕಂಜಿ ಬೆನ್ನನೆ ಬಿದ್ದೆ ||ದೀನೋದ್ಧಾರಕನೆಂದು ಶರಣು ಬಂದೆ |ಭೀಮಾಶಂಕರನ ಧ್ಯಾನಕೆ ತಂದೆ 3

***