RSS song .
ಮುಂದೆ ಮುಂದೆ ನಡೆವುದೇ ನಮ್ಮ ನೀತಿಯು
ಇಲ್ಲವೆಮಗೆ ಅಂಜಿಕೆ ಭಯ ಭೀತಿಯು ||ಪ||
ಇಟ್ಟ ಹೆಜ್ಜೆ ಹಿಂದೆಗೆಯದೆ ಚಲಿಸಿ ವೇಗದಿ
ಹೊಸ ದಿಗಂತಗಳನು ದಾಟಿ ಧ್ಯೇಯ ಮಾರ್ಗದಿ
ಕಲ್ಲು ಮುಳ್ಳಿನಾಗರ, ಕಷ್ಟ ನಷ್ಟ ಭೀಕರ
ಗೆಲ್ಲುವನಕ ನಿಲ್ಲವೆಲ್ಲೂ ಬರಲಿ ವಿಘ್ನಸಾವಿರ ||೧||
ಛತ್ರಪತಿ ಚರಿತೆಯೆಮಗೆ ಸ್ಫೂರ್ತಿದಾಯಕ
ಶತ್ರುನಾಶ ಗೈದ ಗಾಥೆ ರೋಮಾಂಚಕ
ನಾವು ವೀರಪುತ್ರರು, ಮಾನವತೆಯ ಮಿತ್ರರು
ವ್ಯಕ್ತಿ ವ್ಯಕ್ತಿಯಾಗಲಿಂದು ನಾಡ ರಕ್ಷಕ ||೨||
ವಿಘ್ನ ಸಂತೋಷಿಗಳಿಗೆ ಪಾಠ ಕಲಿಸುವಾ
ಸಂಘ ಶಕ್ತಿ ರಾಷ್ಟ್ರ ಶಕ್ತಿ ಎಂದು ಸಾರುವಾ
ಹುಸಿ ವಿಚಾರವಾದಕೆ, ನಾಡನೊಡೆವ ಭೇದಕೆ
ಚಿರವಿದಾಯ ಸಾರಿ ಭವ್ಯರಾಷ್ಟ್ರ ಕಟ್ಟುವಾ ||೩||
***
muMde muMde naDevudE namma nItiyu
illavemage aMjike Baya BItiyu ||pa||
iTTa hejje hiMdegeyade calisi vEgadi
hosa digaMtagaLanu dATi dhyEya mArgadi
kallu muLLinAgara, kaShTa naShTa BIkara
gelluvanaka nillavellU barali viGnasAvira ||1||
Catrapati cariteyemage sphUrtidAyaka
SatrunASa gaida gAthe rOmAMcaka
nAvu vIraputraru, mAnavateya mitraru
vyakti vyaktiyAgaliMdu nADa rakShaka ||2||
viGna saMtOShigaLige pATha kalisuvA
saMGa Sakti rAShTra Sakti eMdu sAruvA
husi vicAravAdake, nADanoDeva BEdake
ciravidAya sAri BavyarAShTra kaTTuvA ||3||
***