Showing posts with label ಸಲಹು ವೆಂಕಟರಮಣ ದಯಾಂಬುಧಿಸಲಹು prasannavenkata. Show all posts
Showing posts with label ಸಲಹು ವೆಂಕಟರಮಣ ದಯಾಂಬುಧಿಸಲಹು prasannavenkata. Show all posts

Monday, 18 November 2019

ಸಲಹು ವೆಂಕಟರಮಣ ದಯಾಂಬುಧಿಸಲಹು ankita prasannavenkata

by ಪ್ರಸನ್ನವೆಂಕಟದಾಸರು
ಸಲಹು ವೆಂಕಟರಮಣ ದಯಾಂಬುಧಿಸಲಹು ವೆಂಕಟರಮಣ ಪ.

ಮಸ್ತಕದೊಳೊಪ್ಪುವ ಮಾಣಿಕ ಮಕುಟದಕಸ್ತೂರಿನಾಮದ ಚೆಲುವವಿಸ್ತರ ಕದಪಿಲಿ ಹೊಳೆವಕುಂಡಲಪ್ರಶಸ್ತವದನಜಗಜೀವ1

ಎಳೆನಗೆ ತಿಂಗಳ ಕಾಂತಿಲಿಹೃತ್ತಾಪಕಳೆವ ಕರುಣಿ ಸಿರಿಕಾಂತಗಳದೊಳು ವನಮಾಲೆವೈಜಯಂತಿಪದಕಗಳೊಲೆವ ಮಂಗಳಮೂರ್ತಿಮಂತ 2

ಮುತ್ತಿನ ಸರ ಸರಪಳಿ ಭುಜಕೀರ್ತಿಯುಎತ್ತಿದ ಶಂಖಾರಿಪಾಣೆರತ್ತುನ ಮೇಲೊಡ್ಯಾಣ ಕಂಕಣ ಮುದ್ರೆಒತ್ತೆ ಅಭಯವರದನೆ 3

ಉಟ್ಟು ಪೊಂದಟ್ಟಿ ಕಠಾರಿ ಕಟ್ಟಿರುವದುಷ್ಟರ ರಣಜಿತವೀರಇಟ್ಟ ವಜ್ರದ ಕಾಲಂದಿಗೆ ಪಾವುಗೆಮೆಟ್ಟಿದ ಸುರರಮಂದಾರ4
ಅಗರುಚಂದನಕಪ್ಪುರ ಕೇಶರ ಸುರಭಿಗಳಿಗೆ ಅತಿಪ್ರಿಯ ಅಂಗಮಘಮಘಿಸುವ ಮಲ್ಲಿಗೆ ಸಂಪಿಗೆಯಮಾಲೆಗಳ ಪ್ರಸನ್ವೆಂಕಟ ರಂಗ 5
******