..
ಮಂಗಳ ಜಯ ಜಯ ಜಯ ಮಂಗಳ ಪ.
ಮಂಗಳ ಮೂರ್ತಿಗೆ ಮಂಗಳ ಕೀರ್ತಿಗೆ
ಮಂಗಳ ದೇವಿಯರರಸನಿಗೆ
ಮಂಗಳ ಮನುಮಥಪಿತನಿಗೆ ಮಂಗಳ
ಮಂಗಳ ಮಹಿಮಗೆ ಮಂಗಳ 1
ಅಚ್ಚುತಾನಂತ ಗೋವಿಂದಗೆ ಮಂಗಳ
ಸಚ್ಚÀರಿತ್ರನಿಗೆ ಸಕಲ ಮಂಗಳ
ಸಚ್ಚಿದಾನಂದ ಸ್ವರೂಪಗೆ ಮಂಗಳ
ಅಚ್ಚಹೃದಯನಿಗೆ ಅತಿ ಮಂಗಳ 2
ಕೇಶವ ನಾರಾಯಣನಿಗೆ ಮಂಗಳ
ಕೇಶಿಸೂದನನಿಗೆ ಅತಿ ಮಂಗಳ
ಶೇಷಶಯನ ಹೃಷೀಕೇಶಗೆ ಮಂಗಳ
ವಾಸುದೇವನಿಗೆ ಸಕಲ ಮಂಗಳ 3
ದಾನವವೈರಿ ದೆಸೆದೆಸೆಗಳಿಗೆ ಮಂಗಳ
ಹೀನಕುಲದವಗೆ ಹೆಚ್ಚು ಮಂಗಳ
ಆನಂದತೀರ್ಥಮುನಿಯ ಮುದ್ದುಕೃಷ್ಣಗೆ
ಶ್ರೀನಾರಿಯೆತ್ತುವ ಶುಭಮಂಗಳ 4
ನಿಗಮವ ತಂದ ಮತ್ಸ್ಯನಿಗೆ ನಿತ್ಯಮಂಗಳ
ನಗಧರ ಕೂರ್ಮಗೆ ಅತಿಮಂಗಳ
ಜಗತಿಯನೆತ್ತದ [ವರಾಹಗೆ]ಮಂಗಳ
ಮಗುವ ಕಾಯಿದ ನೃಸಿಂಹಗೆ ಮಂಗಳ 5
ದಾನವ ಬೇಡಿದ ಸ್ವಾಮಿಗೆ ಮಂಗಳ
ಕ್ಷೋಣಿಶಾಂತನಿಗೆ ಸಕಲ ಮಂಗಳ
ಜÁನಕೀರಮಣ ರಾಮಗೆ ಮಂಗಳ
ಶ್ರೀನಂದಾಚ್ಯುತನಿಗೆ ಶುಭಮಂಗಳ 6
ಬುದ್ಧವತಾರ ಶ್ರೀಬದ್ಧಗೆ ಮಂಗಳ
ಸದ್ಧರ್ಮ ಮೂಲಸ್ವಾಮಿಗೆ ಮಂಗಳ
ಮಧ್ವವಲ್ಲಭ ಹಯವದನರಾಯನಿಗಿಂಥ
ಶುದ್ಧಸ್ವಭಾವಗೆ ಶುಭಮಂಗಳ 7
***