Showing posts with label ಯಾಕೆ ಪುಟ್ಟದೊ ಕರುಣ ಶ್ರೀ ಕರಾರ್ಚಿತ ಜಗದೇಕಕಾರಣ ಶ್ರೀಕರಾದೇವಾ gurujagannatha vittala. Show all posts
Showing posts with label ಯಾಕೆ ಪುಟ್ಟದೊ ಕರುಣ ಶ್ರೀ ಕರಾರ್ಚಿತ ಜಗದೇಕಕಾರಣ ಶ್ರೀಕರಾದೇವಾ gurujagannatha vittala. Show all posts

Wednesday 1 September 2021

ಯಾಕೆ ಪುಟ್ಟದೊ ಕರುಣ ಶ್ರೀ ಕರಾರ್ಚಿತ ಜಗದೇಕಕಾರಣ ಶ್ರೀಕರಾದೇವಾ ankita gurujagannatha vittala

 ..

ಯಾಕೆ ಪುಟ್ಟದೊ ಕರುಣ

ಶ್ರೀ ಕರಾರ್ಚಿತ ಜಗದೇಕಕಾರಣ ಶ್ರೀಕರಾದೇವಾ ಪ


ಪಾಕಶಾಸನ ಮುಖ್ಯಾನೇಕ ಜೀವರನು ನೀ

ಸಾಕುವನಿಗೆ ನಾನ್ಯಾಕೆ ಬಾರೆನೊ ಮನಕೆ ಅ.ಪ


ಅಶÀನವಸನಗಳಿಲ್ಲಾ ಪಶುಮನಿಧನವಿಲ್ಲಾ

ಕೃಷಿಧಾನ್ಯಕನಕವಿಲ್ಲಾ ಸ್ವಾಮಿ

ವಸತಿಸ್ಥಳವಿಲ್ಲಾ ವಸುಧೆ ತಿರುಗುವೆನಲ್ಲಾ

ವಸುಧೆ ಭಾರಾದೆನಲ್ಲಾ ಸ್ವಾಮಿ

ಕುಸುಮನಾಭನೆ ಎನಗೆ ಮುಸುಗಿದ ದಾರಿದ್ರ್ಯ

ಕಸವಿಸಿ ಬಡಿಪದಲ್ಲಾ ಸ್ವಾಮಿ

ಬಿಸಜಲೋಚನ ಮಹಾ ವ್ಯಸನಪಂಕದಿ ಬಿದ್ದು

ವ್ಯಸನ ಬಡುತಿಹ ದ್ವಿಪದ ಪಶುವಿನ ನೋಡಿ ನಿನಗೆ 1


ಜನನಿ ಜನಕ ತನಯಾ ವನುತೆ ಈ ದೇಹಾ

ಅನುಬಂಧಿ ಮೊದಲಾದ ಜನರಾ ಸ್ವಾಮಿ

ಮನಕೆ ಬಾರೆನೊ ಅವರ ಅನುಕೂಲವಾಗದಲೆ

ಜನಕೆ ಬ್ಯಾಸರನಾದೆನೊ ಸ್ವಾಮಿ

ಮನುಜದೇಹವ ಧರಿಸಿ ಮನುಜಸುಖಗಳನ್ನು

ಅನುಭವವೆ ಮಾಡಲಿಲ್ಲಾ ಸ್ವಾಮಿ

ಜನುಮವ್ಯಾಕೆಂದು ಆ ಜನರೋಕ್ತಿಯಿಂದೀಗ

ವನದಲ್ಲಿ ಸಂಚಾರ ಇನುತೆ ಮಾಳ್ಪನ ನೋಡಿ 2


ಶÀರಣಪಾಲಕ ಸ್ವಾಮಿ ಕರುಣಸಾಗರನೆಂದು

ಶರುಣುಯೈದಿದೆನೊ ನಿನ್ನಾ ಸ್ವಾಮಿ

ಕರುಣಪೂರ್ವಕ ಮದಂತಃಕರಣ ಮಧ್ಯದಿ ನಿನ್ನ

ಚರಣಪಂಕಜ ತೋರಿಸೋ ಸ್ವಾಮಿ

ವರಣಿಸಾಲೇನಿನ್ನು ಸುಪರಣವಹÀನ ಭವ

ಅರಣವನೆ ದಾಟಿಸೋ ಸ್ವಾಮಿ

ಕರಣರಹಿತಶಾಯಿ ಕರಣ ವೈರಿಯ ಮಿತ್ರ

ಕರುಣಿಸ್ಯನ್ನನು ಎಂದು ಶರಣು ಪೊಕ್ಕದು ನೋಡೀ 3


ನರರ ಸೇವೆಯ ಮಾಡಿ ನರರ ಗುಣ ಕೊಂಡಾಡಿ

ನರರ ಸ್ತೋತ್ರವನೆ ಮಾಡಿ ಸ್ವಾಮಿ

ನರರ ಯಾಚನೆ ಮಾಡಿ ನರರ ಯೋಚನೆ ಮಾಡಿ

ನರರ ಮನೆವಾಸಮಾಡಿ ಸ್ವಾಮಿ

ನರರ ಮಾತನೆ ಕೇಳಿ ನರರಗಾಥವ ಕೇಳಿ

ನರರ ದೌತ್ಯವನೆ ಮಾಡಿ ಸ್ವಾಮಿ

ಪರಿಪರಿಭವದುಃಖ ಹಿರಿದಾಗಿ ಅನುಭವಿಸಿ

ಹರಿ ನಿನ್ನ ಚರಣಾಶ್ರಯಸಿದವನಾ ನೋಡೀ 4


ಯಾತಕೀಪರಿ ಕಷ್ಟನಾಥ ಬಂದಿಹÀದೆನಗೆ

ಯಾತಕೆ ಪೋಗದಿನ್ನಾ ಸ್ವಾಮಿ

ವಾತದೇವನ ತಾತ ಸೀತಾನಾಥನೆ ನಿನ್ನ

ದೂತರಾಧಮನಲ್ಲವೇ ಸ್ವಾಮಿ

ತಾತ ಕೇಳೀಗೆನ್ನ ಮಾತು ಮನಸಿಗೆ ತಂದು

ಯಾತಕೂ ಪರರ ಬೇಡದಂತೆ ಸ್ವಾಮಿ

ದಾತ ನೀನೆಂದು ನಾ ಆತುರದಿ ಬೇಡಿದೆನೊ

ನೀತ ಗುರುಜಗನ್ನಾಥವಿಠಲ ನಿನಗೆ5

****