Showing posts with label ಯಾತಕೆ ದಯಮಾಡಲೊಲ್ಲೆ ರಂಗಯ್ಯ ಜಗನ್ನಾಥ ನಿನ್ನ neleyadikeshava YAATAKE DAYAMAADALOLLE RANGAYYA JAGANNATHA NINNA. Show all posts
Showing posts with label ಯಾತಕೆ ದಯಮಾಡಲೊಲ್ಲೆ ರಂಗಯ್ಯ ಜಗನ್ನಾಥ ನಿನ್ನ neleyadikeshava YAATAKE DAYAMAADALOLLE RANGAYYA JAGANNATHA NINNA. Show all posts

Sunday, 19 December 2021

ಯಾತಕೆ ದಯಮಾಡಲೊಲ್ಲೆ ರಂಗಯ್ಯ ಜಗನ್ನಾಥ ನಿನ್ನ ankita neleyadikeshava YAATAKE DAYAMAADALOLLE RANGAYYA JAGANNATHA NINNA

ಯಾತಕೆ ದಯಮಾಡಲೊಲ್ಲೆ ರಂಗಯ್ಯ - ಜಗ ಪ

ನ್ನಾಥ ನಿನ್ನ ನಂಬಿದೆನಲ್ಲೊ ರಂಗಯ್ಯ ಅ

ಚಿಕ್ಕಂದು ಮೊದಲೆ ನಾನು ರಂಗಯ್ಯ - ನೀನೆದಿಕ್ಕೆಂದು ನಂಬಿದೆನೊ ರಂಗಯ್ಯ1

ನೆಂಟರಿಷ್ಟರು ನೀನೆ ರಂಗಯ್ಯ - ನೀನೆಬಂಟರಿಗೆ ಬಂಟನಯ್ಯ ರಂಗಯ್ಯ2

ದಾಸರ ದಾಸನಯ್ಯ ರಂಗಯ್ಯ - ಕರ್ಮಪಾಶಗಳ ಮೋಚನೆ ಮಾಡೊ ರಂಗಯ್ಯ3

ಶೇಷಗಿರಿ ವಾಸ ರಂಗಯ್ಯ - ಆದಿಕೇಶವನೆ ರಕ್ಷಿಸೊ ರಂಗಯ್ಯ4

***