Showing posts with label ಅಂಜಬ್ಯಾಡ ಬ್ಯಾಡೆಲೆ ಜಾಣಿ ಭವಭಂಜನ ಬಲರಾಮನ ಅಣಿ ramesha. Show all posts
Showing posts with label ಅಂಜಬ್ಯಾಡ ಬ್ಯಾಡೆಲೆ ಜಾಣಿ ಭವಭಂಜನ ಬಲರಾಮನ ಅಣಿ ramesha. Show all posts

Monday, 2 August 2021

ಅಂಜಬ್ಯಾಡ ಬ್ಯಾಡೆಲೆ ಜಾಣಿ ಭವಭಂಜನ ಬಲರಾಮನ ಅಣಿ ankita ramesha

ಅಂಜಬ್ಯಾಡ ಬ್ಯಾಡೆಲೆ ಜಾಣಿ ಭವಭಂಜನ ಬಲರಾಮನ ಅಣಿ ಪ.

ಸಂಜಿಲೆ ಬಂದೆವೆಂಬೊ ಅಂಜಿಕೆ ನಿನಗ್ಯಾಕೆ ಕುಂಜರಗಮನೆ ಕಮಲಾಕ್ಷಿಕುಂಜರಗಮನೆ ಕಮಲಾಕ್ಷಿ ದ್ರೌಪದಿಅಂಜಬ್ಯಾಡ ಅಭಯಕೊಡತೇವ1

ಭಯವುಳ್ಳ ಬಾಲೆ ನೀ ಐವರಿಗೆ ಇಂತಿಪ್ಪೆಸೈವಲ್ಲದ ಮಾತು ಜಗಕಿದುಸೈವಲ್ಲದ ಮಾತು ಜಗಕಿದು ಈ ನಡೆತೆನಯವಲ್ಲವೆಂದು ನಗುತಾರೆ2

ಲೋಕದೊಳೊಬ್ಬಳಿಗೆ ಏಕಪತಿಯುಂಟುಏಕಕಾಲದೆ ಐವರ ಏಕಕಾಲದಲೆ ಐವರನ ಕೂಡೋದುನಾ ಕಾಣಿನೆಲ್ಲೂ ಕೌತುಕವ3

ಕೆಂಡವ ತುಂಬಿದ ಕುಂಡದಿ ಪುಟ್ಟಿದಿಕಂಡ ಜನಕೆಲ್ಲ ಭಯವಾದಿಕಂಡ ಜನಕೆಲ್ಲ ಭಯವಾದಿ ಭೀಮಸೇನನಿನ್ನ ಗಂಡ ಎಂಥ ಎದೆಗಾರ4

ಎಲ್ಲ ನಾರಿಯರೊಬ್ಬ ನಲ್ಲನಬೆರಿಯೆಬಲ್ಲಿದ ಭೂಪ ರೈವರುಬಲ್ಲಿದ ಭೂಪರೈವರ ನೊಲಿಸಿದಿಎಲ್ಲರಂತಲ್ಲ ಬಲುಧೀರೆ 5

ಪಲ್ಯಾದ ತುದಿಯಿಂದ ಎಲ್ಲ ಪದಾರ್ಥಮಾಡಿಬಲ್ಲಿದ ಮುನಿಗೆ ಉಣಿಸಿದಿಬಲ್ಲಿದ ಮುನಿಗೆ ಉಣಿಸಿದಿ ಇಂದ್ರÀಜಾಲಬಲ್ಲವಳಿಗಿಂಥ ಭಯವುಂಟೆ6


ಕೇಳ ದ್ರೌಪತಿ ರಾಜ್ಯವಾಳೊಗಂಡನ ಕೈಲೆಲಾಳಿ ತಕ್ಕೊಂಡ ಪರಿಯಂತೆಲಾಳಿ ತಕ್ಕೊಂಡ ಪರಿಯಂತೆ ಈ ನಡತೆಕೇಳಿದವರೆಲ್ಲ ನಗುತಾರೆ 7

ಅತ್ತೆಯ ಮಗ ನಿನ್ನ ಅತ್ಯಂತ ನಗೆನೋಡಿತಪ್ತವಾಗೊಮ್ಮೆ ತಿರುಗಿದತಪ್ತವಾಗೊಮ್ಮೆ ತಿರುಗಿದ ದ್ರೌಪತಿಮತ್ತಾರೆ ಬುದ್ಧಿ ಬರಲಿಲ್ಲ8

ಅರಸನ ಮಡದಿ ಒಬ್ಬ ಅರಸನ ಮನೆಯಲ್ಲಿನಿರುತ ದಾಸಿಯೆಂದು ಇರುತಲೆನಿರುತ ದಾಸಿಯೆಂದು ಇರುತಲೆ ಸೇವಿಸೋದುಈ ಸರಸ ರಮೇಶಗೆ ಹರುಷೇನ9

****