Showing posts with label ದಾರಿಯೇನಿದಕೆ ಮುರಾರಿ ನೀ ಕೈಯ ಪಿಡಿಯದಿರೆ purandara vittala DAARIYENIDAKE MURAARI NEE KAIYA PIDIYADIRE. Show all posts
Showing posts with label ದಾರಿಯೇನಿದಕೆ ಮುರಾರಿ ನೀ ಕೈಯ ಪಿಡಿಯದಿರೆ purandara vittala DAARIYENIDAKE MURAARI NEE KAIYA PIDIYADIRE. Show all posts

Monday, 8 November 2021

ದಾರಿಯೇನಿದಕೆ ಮುರಾರಿ ನೀ ಕೈಯ ಪಿಡಿಯದಿರೆ purandara vittala DAARIYENIDAKE MURAARI NEE KAIYA PIDIYADIRE

RAGA KALYANI   TALA ADI


ದಾರಿಯೇನಿದಕೆ ಮುರಾರಿ ನೀ ಕೈಯ ಪಿಡಿಯದಿರೆ ||ಪ||

ಕಷ್ಟ ಕರ್ಮಂಗಳ ಎಷ್ಟಾದರು ಮಾಳ್ಪೆ, ನಿಷ್ಠೂರ್‍ಅ ನುಡಿಗೆ ಗುರು ಹಿರಿಯರ
ದುಷ್ಟರ ಸಂಗವ ಬಹಳ ಮಾಡಿದರಿಂದ, ಶ್ರೇಷ್ಠರ ಸೇವೆಯೆಂದರೆ ಆಗದೆನಗೆ ||

ಪರರ ದೂಷಣೆ ಪರರ ಪಾಪಂಗಳನೆಲ್ಲ, ಪರಿಪರಿಯಲಿ ಮಾಡಿಕೊಂಬೆ ನಾನು
ಹರಿ ನಾಮಾಮೃತವ ಹೇಳುವುದ ಕೇಳದೆ, ಹರಟೆಯಿಂದ ಹೊತ್ತು ಕಳೆದೆ ನಾ ಹರಿಯೆ ||

ಪಾತಕ ಕರ್ಮಂಗಳ ಮಾಡಿದಜಮಿಳಗೆ, ಪ್ರೀತಿಯಿಂದಲಿ ಮುಕ್ತಿ ಕೊಡಲಿಲ್ಲವೆ
ನೂತನವೇಕಿನ್ನು ಸೂರ್ಯಮಂಡಲವರ್ತಿ ರೀತಿಯಾದನು ಸಿರಿ ಪುರಂದರವಿಠಲ ||
***

ರಾಗ ಕಾಮವರ್ಧಿನಿ/ಪಂತುವರಾಳಿ. 
ಅಟ ತಾಳ (raga, taala may differ in audio)

pallavi

dAriyEnidake murAri nI kaiya piDiyadire

caraNam 1

kaSTa karmangaLa eSTAdaru mALpe niSTURa nuDige guru hariyara
duSTara sanghava bahaLa mADidarinda shrESTara sEveyendare Agadenage

caraNam 2

parara dUSaNe parara pApangaLanella pari pariyali mADi kombe nAnu
hari nAmAmrta hELuvuda kELade haraTeyinda hottu kaLEde nA hariyE

caraNam 3

pAdaka kamalangaLa mADidajAmiLage prIyiyinda mukti koDalillave
nUtanavEginnu sUryamaDalavarti rItiyAdanu siri purandara viTTala
***