Showing posts with label ನಮ್ಮ ರಂಗನ ಕಂಡಿರ್ಯಾ ಹೇಳಿರಿ ನೀವಮ್ಮಾ gurumahipati. Show all posts
Showing posts with label ನಮ್ಮ ರಂಗನ ಕಂಡಿರ್ಯಾ ಹೇಳಿರಿ ನೀವಮ್ಮಾ gurumahipati. Show all posts

Wednesday, 1 September 2021

ನಮ್ಮ ರಂಗನ ಕಂಡಿರ್ಯಾ ಹೇಳಿರಿ ನೀವಮ್ಮಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ನಮ್ಮ ರಂಗನ ಕಂಡಿರ್ಯಾ ಹೇಳಿರಿ ನೀವಮ್ಮಾ ಪ 


ಅರಳೆಲೆ ಮಾಗಾಯಿ ಕಿರಿಗೂದಲು ಮುತ್ತಿನ| ವರಮಕುಟ ಪದಕ ಕೊರಳಿನಾ 1 

ಕುಂಡಲ ಕುಡಿ-ಗಂಗಳ ಬೆಳಗಿನ| ಚೆಲುವ ಕದವು ಮುದ್ದು ಸೊಬಗಿನಾ 2 

ಬರಿಮುಗುಳ ನೆಗೆಯಾ ಸುದಂತ ಸಾಲಿನ ಸಿರಿವತ್ಸಧರ ಹೇಮಚಸನನಾ3 

ಧರೆಯೊಳು ಭಕ್ತರ ಮಾಡುವ ಪಾವನ| ಮಿರುಪರನ್ನದಂಗುರ ಬೆರಳಿನಾ 4 

ಕೊಳಲನೂದಿ ಗೋಪ್ಯಾರ ಮೋಹಿಪ ಮನಸಿನಾ| ಒಲಿದು ಪಾಲಿಪ ಮಹಿಪತಿಜನ 5

****