Showing posts with label ಬಂದನಕ್ರೂರ ವ್ರಜಕೆ ಗೋಪೀ pranesha vittala. Show all posts
Showing posts with label ಬಂದನಕ್ರೂರ ವ್ರಜಕೆ ಗೋಪೀ pranesha vittala. Show all posts

Thursday, 14 November 2019

ಬಂದನಕ್ರೂರ ವ್ರಜಕೆ ಗೋಪೀ ankita pranesha vittala

by ಪ್ರಾಣೇಶದಾಸರು
ಬಂದನಕ್ರೂರ ವ್ರಜಕೆ ಗೋಪೀ ಕಂದನ ಚರಣಾರ |ವಿಂದ ಕಾಂಬುವೆ ನಿಂದಿನ ದಿನ ಸುದಿನೆಂದು ಪ

ಎಷ್ಟು ಜನ್ಮದಸುಕೃತಒದಗೀತೋ ಈ |ದುಷ್ಟನ ಸಂಗದಿಂದ ||ಬಿಟ್ಟು ಇಚ್ಛಾನುಸಾರದಿ ಗೋಕುಲದಮಾರ್ಗ|ಮೆಟ್ಟಿದೆಹರಿದಯೆಯಾದದ್ದು ನೋಡೆಂದು 1

ಒಂದೊಂದು ಹೆಜ್ಜೆಗಳ ಬರುತ ಕ್ರಮ- |ದಿಂದ ಯಮುನೆಯ ದಾಟಿ ||ವೃಂದಾವನದ ಭೂಮಿ ಕಾಣುತ ಬಹು ಮುದ- |ದಿಂಧರಿ ಹರಿಯೆಂದು ನಯನೋದ (ಕ)ಸುರಿಸುತ್ತ 2

ಇಲ್ಲೆಲ್ಲ ಸಂಚಾರವ ಮಾಡಿಹ ಖಳ- |ದಲ್ಲಣನೆಂದು ಧೂಳೀ- |ಯಲ್ಲ್ಯುರುಳುತ ಪೊಗಳುತ ಶ್ರೀ ಪ್ರಾಣೇಶ ವಿ- |ಠಲಗೆರಗಿ ಕೈ ಮುಗಿದು ನಿಂದ ತುತಿಸುತ 3
*******