Showing posts with label ಧೀರೇಂದ್ರ ಧೀರೇಂದ್ರ ಧೀರ ಮೂಲರಾಮನ gopalakrishna vittala dheerendra teertha stutih. Show all posts
Showing posts with label ಧೀರೇಂದ್ರ ಧೀರೇಂದ್ರ ಧೀರ ಮೂಲರಾಮನ gopalakrishna vittala dheerendra teertha stutih. Show all posts

Monday, 2 August 2021

ಧೀರೇಂದ್ರ ಧೀರೇಂದ್ರ ಧೀರ ಮೂಲರಾಮನ ankita gopalakrishna vittala dheerendra teertha stutih

ಧೀರೇಂದ್ರ ಧೀರೇಂದ್ರ ಪ.

ಧೀರ ಮೂಲರಾಮನ ಪದಕಮಲವ

ತೋರು ಮನದಿ ನೀ ಕುಣೀಕುಣಿದಾಡುವೆ ಅ.ಪ.

ವರದಾ ತೀರದಿ ವರಗಳ ಕೊಡುತಲಿ

ಮರುತಮತಾಂಬುಧಿ ಚಂದಿರನೆನಿಸಿದ 1

ಕುಷ್ಟಾದಿ ಬಹು ದುಷ್ಟ ಗ್ರಹಗಳ

ಕುಟ್ಯೋಡಿಸುತ ಅಭೀಷ್ಟವಗರೆಯುವ 2

ಮುನಿ ಮೌಳಿಯೆ ನಿನ್ನನು ಸ್ತುತಿಗೈಯುತ

ಘನ ಭಕ್ತಿಯೊಳಾಂ ಕುಣಿಕುಣಿದಾಡುವೆ 3

ಅರ್ಥಿಯಿಂದ ನಾ ನರ್ತನಗೈಯುವೆ

ಸುತ್ತಿ ಸುತ್ತಿ ದಾಸತ್ವದ ನೇಮದಿ 4

ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲಪ್ರಿಯ

ಕೃಷ್ಣನ ಚರಣವ ಥಟ್ಟನೆ ತೋರಿಸೋ 5

****