ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯಯ್ಯಾ ಎನ್ನದಯದೀ ಸಿಂಹಾದ್ರೀಶಾ ಪ
ಅಖಿಲದೊಳಗೆ ಅತಿ ದುರ್ಜನ ಪ್ರಭೆಯಲಿ ನಿಖಿಳ ಧರ್ಮಗಳಡಗಲು ಕಂಡು ಭಕುತರ ಗೋಸುಗ ಅವತಾರವತಾಳಿ ಪ್ರಕಟಿಸಿದಿಳೆಯೊಳು ಚಿನ್ಮಯನೇ1
ಪರಿ ಸಾಧನದಿಂದಲಿ ದೇಹವ ನಿರುಪಮ ವಜ್ರದಂದದಿ ಮಾಡೀ ಮೆರೆವ ಗೋರಕ್ಷಗ ಬೋದಿಸ್ಯಕಲ್ಪಿತ ಶರೀರವ ಮಾಡಿ ನಿಲಿಸಿದೆಯ್ಯಾ2
ಅನಸೂಯಾ ಜಠರದಲುದ್ಭವಿಸಿ ಅನುದಿನ ಮುನಿ ಮಾನಸಲಿರುವಾ ಅನುಪಮ ಚರಿತನೆ ಮಹಿಪತಿ ನಂದನ ಮನ ದೈವಾಗಿಹೆ ಘನ ಕರುಣಾ 3
****