ಕಾಖಂಡಕಿ ಶ್ರೀ ಕೃಷ್ಣದಾಸರು
ಏನೆಂದ್ಹೇಳಲಿ ನಾನು | ಸಾಧುರಾ ಮಹಿಮೆಯನು | ಮನವ ವುನ್ಮನಮಾಡೀ | ಘನಸುಖದೊಳುಕೂಡಿ | ಆನಂದದೊಳಗಿಹನು ಪ
ಬಹುಮಾತವನಾಡಾ | ಮೌನವಹಿಡಿದುಕೂಡಾ | ಸಹಜದಿ ನುಡಿವಂದಾ | ನಾಡಿದ ರದರಿಂದಾ | ಸ್ವಹಿತದ ಸುಖನೋಡಾ 1
ಅರಿಯಾನಂತಿಹನಲ್ಲಾ | ಅರಿವನು ಉಳಿದಿಲ್ಲಾ | ಅರಹು ಮರಹು ಮೀರಿ | ಕುರ್ಹುವಿನ ಮನೆಸೇರಿ | ಅರಿಸುಖ ಸಮವೆಲ್ಲಾ 2
ಸಾಧುರ ನಿಜವೆಲ್ಲಾ | ಸಾಧು ಆದವ ಬಲ್ಲಾ ಸಾಧುರ ವೇಷದಿ | ಉದರವ ಹೊರೆಯುತಾ | ಬೋಧಿಸುವದಲ್ಲಾ 3
ಆಶೆಯಂಬುದು ಬಿಟ್ಟು ವೇಷವ ಕಳೆದಿಟ್ಟು | ಲೇಸಾಗಿ ಗುರುವರ | ಮಹಿಪತಿಸ್ವಾಮಿಯಾ | ಧ್ಯಾಸದಿ ಬೆರೆತಿಹನು 4
***