Showing posts with label ರಾಘವೇಂದ್ರ ತೀರ್ಥರು ಕರುಣಿ jagannatha vittala. Show all posts
Showing posts with label ರಾಘವೇಂದ್ರ ತೀರ್ಥರು ಕರುಣಿ jagannatha vittala. Show all posts

Saturday, 14 December 2019

ರಾಘವೇಂದ್ರ ತೀರ್ಥರು ಕರುಣಿ ankita jagannatha vittala

ಜಗನ್ನಾಥದಾಸರು
ರಾಘವೇಂದ್ರ ತೀರ್ಥರು
ಕರುಣಿಗಳೊಳಗೆಣೆಗಾಣಿ ನಾ ನಿನಗೆ ಸ
ದ್ಗುರುವರ ರಾಘÀವೇಂದ್ರ
ಚರಣ ಕಮಲಯುಗ ಮೊರೆಹೊಕ್ಕವರ ಮನದ
ಹರಕೆಯ ನಿರುತ ಈವೆ ನೀ ಕಾವೆ ಪ

ರಾಘವೇಂದ್ರ ಗುರುವೆ ನೀ ಗತಿ ಎಂದನು
ರಾಗದಿಂದಲಿ ಭಜಿಪ
ಭಾಗವತರ ದುರಿತೌಘಗಳಳಿದು ಚ
ನ್ನಾಗಿ ಸಂತೈಸುವೆ ನೀ ಸನ್ಮೌನಿ 1

ಸುಧೀಂದ್ರ ಯತಿಕರ ಪದುಮ ಸಂಭವ ಮಧು
ವದ ಪಾದಾಂಬುಜ ಮಧುಪಾ
ತ್ರಿದಶ ಭೂರುಹದಂತೆ ಬುಧ ಜನರೀಪ್ಸಿತ
ಒದಗಿ ಪಾಲಿಸಿ ಪೊರೆವೆ ಮದ್ಗುರುವೆ 2

ಕುಧರದೇವನ ದಿವ್ಯರದನದಿ ಜನಿಸಿದ
ನದಿಯ ತೀರದಿ ಶೋಭಿಪ
ಸದಮಲ ಘನಮಂತ್ರ ಸದನನಿಲಯ ಜಿತ
ಮದನ ಶ್ರೀ ಜಗನ್ನಾಥ ವಿಠಲದೂತ 3
*********