..
kruti by ಚಿಕ್ಕೋಡಿ ಆಚಾರ್ಯ sirivatsankitaru (chikkodi acharyaru)
ಜಗನ್ನಾಥದಾಸರು
ತಂಗೀ ನೋಡಿದೇನೆ ಇಂದು ಪ
ಕಂಗಳ ಧಣಿ ರಂಗವೊಲಿದ ಮಹಾತ್ಮರ ಅ.ಪ
ದ್ವಾಪರದಲ್ಲಿಯ ಶಲ್ಯರು ಇವರಂತೆ
ತಪಸಿ ಪ್ರಹ್ಲಾದನ ಅನುಜರು ಇವರಂತೆ
ಕಪಟರಹಿತ ಕಲ್ಕೀರ ಭೂಪನ
ರೂಪರೇಶೆಯ ನಿರ್ಮಿಸಿ ಮೆರೆದವರ 1
ಎಂಥ ಪುಣ್ಯವಂತರು ನಮ್ಮ ಹಿರಿಯರು
ಇಂಥ ಮಹಾತ್ಮರ ಸೇವಿಸಿ ಬದುಕಲು
ನಿಂತು ಮನದಿ ಇವರ ನಾಮ ಭ್ರಾಂತಿಯಾಗಲು
ಸಂತೋಷದಿ ಶಾಂತ ಹೊಳೆ ಹರಿಸುವರನು 2
ಶಿಷ್ಟ ಸದಾಚಾರ ಸೃಷ್ಟಿಸಿ ಜಗದಲಿ
ಶ್ರೇಷ್ಠ ದಾಸರೆಂದು ಖ್ಯಾತರಾಗಿಹರ
ಅಷ್ಟಮಾಂಗ ಸಾಷ್ಟಾಂಗದಿ ಎರಗಲು
ಸೃಷ್ಟೀಶ ಸಿರಿವತ್ಸಾಂಕಿತನ ತೋರ್ಪರ 3
***