Thursday 5 August 2021

ತಂಗೀ ನೋಡಿದೇನೆ ಇಂದು ಕಂಗಳ ಧಣಿ ankita sirivatsankita jagannatha dasa stutih

 ..

kruti by ಚಿಕ್ಕೋಡಿ ಆಚಾರ್ಯ sirivatsankitaru (chikkodi acharyaru) 


ಜಗನ್ನಾಥದಾಸರು


ತಂಗೀ ನೋಡಿದೇನೆ ಇಂದು ಪ


ಕಂಗಳ ಧಣಿ ರಂಗವೊಲಿದ ಮಹಾತ್ಮರ ಅ.ಪ


ದ್ವಾಪರದಲ್ಲಿಯ ಶಲ್ಯರು ಇವರಂತೆ

ತಪಸಿ ಪ್ರಹ್ಲಾದನ ಅನುಜರು ಇವರಂತೆ

ಕಪಟರಹಿತ ಕಲ್ಕೀರ ಭೂಪನ

ರೂಪರೇಶೆಯ ನಿರ್ಮಿಸಿ ಮೆರೆದವರ 1


ಎಂಥ ಪುಣ್ಯವಂತರು ನಮ್ಮ ಹಿರಿಯರು

ಇಂಥ ಮಹಾತ್ಮರ ಸೇವಿಸಿ ಬದುಕಲು

ನಿಂತು ಮನದಿ ಇವರ ನಾಮ ಭ್ರಾಂತಿಯಾಗಲು

ಸಂತೋಷದಿ ಶಾಂತ ಹೊಳೆ ಹರಿಸುವರನು 2


ಶಿಷ್ಟ ಸದಾಚಾರ ಸೃಷ್ಟಿಸಿ ಜಗದಲಿ

ಶ್ರೇಷ್ಠ ದಾಸರೆಂದು ಖ್ಯಾತರಾಗಿಹರ

ಅಷ್ಟಮಾಂಗ ಸಾಷ್ಟಾಂಗದಿ ಎರಗಲು

ಸೃಷ್ಟೀಶ ಸಿರಿವತ್ಸಾಂಕಿತನ ತೋರ್ಪರ 3

***


No comments:

Post a Comment