by gopalaryaru
ಸತ್ತವರಿಗೆ ನೀನಳುತಲಿರುಮೆನ್ನೂಮತ್ತನಾಗಿ ಮಂದಜೀವಾ ಪ
ಮೃತ್ಯುವೆಂಬರಿಪು ಕುತ್ತಿಕೆಡಹಿದಾಗಮತ್ತಾರಿಗಳುವೆಯೊ ಜೀವಾ ಅ.ಪನೆತ್ತಿಯ ಬಡುಕೊಂಬೆ ಜೀವಾಕತ್ತೆಯಂತೊದರದೆ ಬಿಡದೆ ಕಾಂತೆಯ ಬೆನ್ನಹತ್ತಿ ಹೋಗುತ್ತಿಹೆ ಜೀವಾ 1
ಕತ್ತಲೆಯಂತಿಹ ನಿನ್ನ ವಿದ್ಯೆಯನುತೊತ್ತಳದುಳಿವರೆ ಜೀವಾಉತ್ತಮ ಜನ ಸಂಗವ ಮಾಡು ನಿನ್ನನೀನೆತ್ತಿಕೊ ಭವಕೂಪದಿಂದಾ 2
ಏಳು ಶ್ರವಣ ಮನನವ ಮಾಡು ನೀನಿಂತುಘೋಳಿಟ್ಟರೆ ಫಲವೇನೂಬೀಳು ಗುರುವಿನ ಚರಣ ಕಮಲಗಳಲ್ಲಿನಾಳೆ ಮುಕ್ತಿ ಸುಖವುಂಟೂ 3
ತಾಳು ಶೀತೋಷ್ಣಾದಿ ದೇಹಧರ್ಮಗಳನುಮೂಳ ಸುಮ್ಮನೆ ಕೆಡಬೇಡಾನಾಳೆ ನಾಡಿದ್ದು ಸಾಧಿಸುವೆನೆಂದೆನುತಲೆಹಾಳಾಗಬೇಡೆಲೊ ಜೀವಾ 4
ಇತ್ತಲತ್ತ ಹಿಂದೆಮುಂದೆ ಕೆಳಗೆ ಮೇಲೆಉತ್ತಮ ಬೊಮ್ಮವೆಂದೆನುತಾಸತ್ಯವೆಂದು ಶೃತಿಬ್ರಹ್ಮಪುರಸ್ತಾದೆನುತ್ತ ಸಾರುತ್ತಿದೆ ಜೀವಾ 5
ಮನೆಮಾರು ಧನ ನಿನ್ನತನು ಮೊದಲಾದವುಇನಿತು ನಿತ್ಯವಲ್ಲ ಜೀವಾಘನ ವಿರತಿಯ ಮಾಡು ಮನದಲ್ಲಿ ಧ್ಯಾನಿಸುವಿನುತ ಚೈತನ್ಯವ ಜೀವಾ 6
ಅನುದಿನ ನಿನ್ನ ನಿಜವ ನೀತಿಳಿದರೆಳ್ಳನಿತುಶೋಕಮೋಹವಿಲ್ಲ ಜೀವಾಸನುಮತಿುಂದ ಗೋಪಾಲಾರ್ಯನ ಸೇರಿಚಿನುಮಯನಾಗೆಲೊ ಜೀವಾ 7
***
No comments:
Post a Comment