Showing posts with label ಆನಂದ ಚಿನ್ಮಾತ್ರ ವಪುಷ ಸರ್ವಾಧಾರ ಅನಘ prasannashreenivasa. Show all posts
Showing posts with label ಆನಂದ ಚಿನ್ಮಾತ್ರ ವಪುಷ ಸರ್ವಾಧಾರ ಅನಘ prasannashreenivasa. Show all posts

Thursday, 5 August 2021

ಆನಂದ ಚಿನ್ಮಾತ್ರ ವಪುಷ ಸರ್ವಾಧಾರ ಅನಘ ankita prasannashreenivasa

 ..

kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು

ಶ್ರೀ ರುಧಿರೋದ್ಗಾರಿ ಸಂವತ್ಸರ ಸ್ವಾಮಿ ಧನ್ವಂತರಿ ಸ್ತೋತ್ರ 

ಆನಂದ ಚಿನ್ಮಾತ್ರ ವಪುಷ ಸರ್ವಾಧಾರ ಅನಘ ಕೂರ್ಮಹÀಯ ಶೀಷ್ರ್ಯ ಸ್ತ್ರೀರೂಪ ಅಜಿತ ಆನಮೋ ರುಧಿರೋದ್ಗ್ಗ್ಗಾರಿ ಸಂವತ್ಸರ ಸ್ವಾಮಿ ಅನುತ್ತಮ ಸರ್ವೋತ್ತಮ ಧನ್ವಂತರಿ ರಮೇಶ ಪ 

ರಾಜಗುರು ಮಂತ್ರಿಗುರು ಸÉೀನಾಧಿಪತಿ ಬುಧನು ರಾಜಿಸುವರು ಸೂರ್ಯೇಂದು ಕವಿ ಭೂಮ ರವಿಜ ಪ್ರಜ್ವಲಿಸಿ ನೀ ಇವರೊಳ್ ಕೃತಿಯ ನಡೆಸಿ ಲೋಕ ಪ್ರಜೆಗಳಿಗೆ ಮಳೆ ಬೆಳೆ ಸೌಖ್ಯವಿತ್ತು ಪÉೂೀಷಿಸುವಿ 1

 ದೇಶದೇಶ ರಾಜ್ಯಾಧಿಪರ್ಗಳ ಪರಸ್ಪರ ಸಂಶಯ ದುರ್ಮನವ ಆಗಾಗ ಶಾಂತ ಮಾಡುವುದು ಮೋಸಗಾರ ಕುಜನರು ಚೋರ ಕ್ರೂರರು ಮಾಳ್ಪ ಹೊಸ ಹೊಸ ಚಟುವಟಿಕೆ ಪರಿಹರಿಸಿ ಕಾಯೋ ಲೋಕವನು 2 

ವೇದವ್ಯಾಸವಿರಚಿತ ಸಾತ್ವಿಕ ಪುರಾಣಗಳ ಯಥಾರ್ಥ ಪೇಳಿದೆ ದುಷ್ಟಾರ್ಥ ಪೇಳಿ ಜನರ ಮೋಹಿಸಿ ಸಾಧು ಸ್ತ್ರೀಪುರುಷರ ಪ್ರೌಢಕನ್ಯೆ ಬಾಲರ ವಂಚಿಪ ಧೂರ್ತರನು ಅಡಗಿಸಿ ಸತ್ಯಧರ್ಮ ಸಂತಾನ ಬೆಳೆಸೋ 3 

ರಾಜ ಸಚಿವನು ಬೃಹಸ್ಪತಿಯಂತರ್ಗತನಾದ ರಾಜರಾಜೇಶ್ವರನೆ ನೀ ಅಂದು ಮಾನವಿಗೆ ಮದುವೆ ಉಜ್ವಲ ತಪಸ್ವಿಗೆ ಪುತ್ರರ ಒದಗಿಸಿದಿ ಇಂದು ನಿಜ ಭಕ್ತಸುತ ಕಾಮ ಪರಕಾಮ ಜನರಿಗೆ ಒಲಿಯೋ 4

 ಹಿಂದಿನ ಇಂದಿನ ಸ್ವಕರ್ಮ ಪರಕರ್ಮ ಲಬ್ಧ ಮಾಂದ್ಯ ನರತ್ವಕೆ ಚರ್ಮ ಸೂತಕ ಗರ್ಭಿ ವ್ಯಾಧಿಪೀಡಿತ ಸಜ್ಜನರಿಗೆ ಸುಖವೀಯೋ ವೇಧಪ ಪ್ರಸನ್ನ ಶ್ರೀನಿವಾಸ ರುಧಿರೋಧ್ಗಾರಿ ಸ್ವಾಮಿ 5

***