Showing posts with label ನಾಡ ಮಾತು ಬೇಡ ನಾಲಿಗೆ ನಿನ್ನ ಬೇಡಿಕೊಂಬೆನು purandara vittala NAADA MAATU BEDA NAALIGE NINNA BEDIKOMBENU. Show all posts
Showing posts with label ನಾಡ ಮಾತು ಬೇಡ ನಾಲಿಗೆ ನಿನ್ನ ಬೇಡಿಕೊಂಬೆನು purandara vittala NAADA MAATU BEDA NAALIGE NINNA BEDIKOMBENU. Show all posts

Sunday 5 December 2021

ನಾಡ ಮಾತು ಬೇಡ ನಾಲಿಗೆ ನಿನ್ನ ಬೇಡಿಕೊಂಬೆನು purandara vittala NAADA MAATU BEDA NAALIGE NINNA BEDIKOMBENU



ನಾಡಮಾತು ಬೇಡ ನಾಲಿಗೆ ನಿನ್ನ 
ಬೇಡಿಕೊಂಬೆನು ಕಂಡ್ಯ ನಾಲಿಗೆ
ರೂಢಿಗೆ ಶ್ರೀಹರಿ ಕೈವಲ್ಯದಾರಿಯ 
ನಾಮವ ನೆನೆ ಕಂಡ್ಯ ನಾಲಿಗೆ ||ಪ||

ಹಾಸ ಹೊತ್ತಾರೆದ್ದು ನಾಲಿಗೆ ಶ್ರೀನಿ-
ವಾಸನ ನೆನೆ ಕಂಡ್ಯ ನಾಲಿಗೆ 
ಶಕ್ತಿಯಂತೆ ನೀನು ಮತ್ತೆ ಬೊಗಳದಿರು 
ಸತ್ಹಾಂಗಿರು ಕಂಡ್ಯ ನಾಲಿಗೆ ||ಅಪ||

ಉಂಬೋದು ಉಡುವೋದು ನಾಲಿಗೆ 
ಬಹು ತಲಿಬಿಲಿಗೊಂಡೆ ನೀ ನಾಲಿಗೆ
ಮುಂದೆ ಕಾಣದೆ ಹೋಗಿ ಬಂದು 
ಜಗಕ್ಕೆ ತಂದು ನಿಲ್ಲಿಸಿದೆ ನಾಲಿಗೆ ||೧||

ಅತ್ತೆ ಮಾವನ ಬೈವ ನಾಲಿಗೆ
ಇದು ಮತ್ತೆ ಗಂಡನ ಬೈವ ನಾಲಿಗೆ
ಸುತ್ತುಮುತ್ತರದಿಂದ ದೇವ ಬ್ರಹ್ಮರ ಬೈವ 
ನಾಯ್ಹಾಗಿರು ಕಂಡ್ಯ ನಾಲಿಗೆ ||೨||

ರಸ ಬಾಯಾರುಂಬೋದು ನಾಲಿಗೆ
ಶ್ರೀನಿವಾಸನ ನೆನೆ ಕಂಡ್ಯ ನಾಲಿಗೆ
ಪೊಡವಿಯೊಡೆಯ ಎನ್ನ ಪುರಂದರವಿಠಲನ್ನ
ನಾಮವ ನೆನೆ ಕಂಡ್ಯ ನಾಲಿಗೆ ||೩||
***

naaDamaatu bEDa naalige ninna 
bEDikoMbenu kaMDya naalige
rUDhige SrIhari kaivalyadaariya 
naamava nene kaMDya naalige ||pa||

haasa hottaareddu naalige SrIni-
vaasana nene kaMDya naalige 
shaktiyaMte nInu matte bogaLadiru 
sat~haaMgiru kaMDya naalige ||apa||

uMbOdu uDuvOdu naalige 
bahu talibiligoMDe nI naalige
muMde kaaNade hOgi baMdu 
jagakke taMdu nilliside naalige ||1||

atte maavana baiva naalige
idu matte gaMDana baiva naalige
suttumuttaradiMda dEva brahmara baiva 
naayhaagiru kaMDya naalige ||2||

rasa baayaaruMbOdu naalige
SrInivaasana nene kaMDya naalige
poDaviyoDeya enna puraMdaraviThalanna
naamava nene kaMDya naalige ||3||
***

pallavi

nADamAtu bEDa nAlige ninna bEDikombenu kaNDya nAlige rUDhige shrIhari kaivalyadAriya nAmava nene kaNDya nAlige

anupallavi

hAsa hottAreddu nAlige shrInivAsana nene kaNDya nAlige shaktiyante nInu matte pogaLadiru sathAngiru kaNDya nAlige

caraNam 1

umbOdu uDuvOdu nAlige bahu tAmbUlakoNDe nI nAlige
Munde kANade hOgi bandu jagakke tandu nilisida nAlige

caraNam 2

atte mAvana baiva nAlige idu matte gaNDana baiva nAlige
suttu muttaradinda dEva brahmara baiva nAi hAgiru kaNDya nAlige

caraNam 3

rasa bAyArumbOdu nAlige shrInivAsana nene kaNDya nAlige
poDaviyoDeya enna purandara viTTalanna nAmava nene kaNDya nAlige
***

ರಾಗ ಮೋಹನ ಅಟತಾಳ (raga tala may differ in audio)
ನಾಡಮಾತು ಬೇಡ ನಾಲಿಗೆ, ನಿನ್ನ
ಬೇಡಿಕೊಂಬೆನು ಕಂಡ್ಯ ನಾಲಿಗೆ
ರೂಢಿಗೆ ಶ್ರೀಹರಿ ಕೈವಲ್ಯದಾರಿಯ
ನಾಮವ ನೆನೆ ಕಂಡ್ಯ ನಾಲಿಗೆ ||ಪ||

ಹಾರೆ ಹೊತ್ತಾರೆದ್ದು ನಾಲಿಗೆ , ಶ್ರೀನಿ-
ವಾಸನ ನೆನೆ ಕಂಡ್ಯ ನಾಲಿಗೆ
ಶಕ್ತಿಯಂತೆ ನೀನು ಮತ್ತೆ ಬೊಗಳದಿರು
ಸತ್ತ್ಹಾಂಗಿರು ಕಂಡ್ಯ ನಾಲಿಗೆ ||

ಉಂಬೋದು ಉಡುವೋದು ನಾಲಿಗೆ, ಬಹು
ತಲಿಬಿಲಿಗೊಂಡೆ ನೀ ನಾಲಿಗೆ
ಮುಂದೆ ಕಾಣದೆ ಹೋಗಿ ಬಂದು
ಜಗಕ್ಕೆ ತಂದು ನಿಲಿಸಿದ ನಾಲಿಗೆ ||

ಅತ್ತೆ ಮಾವನ ಬೈವ ನಾಲಿಗೆ, ಇದು
ಮತ್ತೆ ಗಂಡನ ಬೈವ ನಾಲಿಗೆ
ಸುತ್ತುಮುತ್ತರದಿಂದ ದೇವಬ್ರಹ್ಮರ ಬೈವ
ನಾಯ್ಹಾಗಿರು ಕಂಡ್ಯ ನಾಲಿಗೆ ||

ರಸ ಬಾಯಾರುಂಬೋದು ನಾಲಿಗೆ, ಶ್ರೀನಿ-
ವಾಸನ ನೆನೆ ಕಂಡ್ಯ ನಾಲಿಗೆ
ಪೊಡವಿಯೊಡೆಯ ಎನ್ನ ಪುರಂದರವಿಠಲನ್ನ
ನಾಮವ ನೆನೆ ಕಂಡ್ಯ ನಾಲಿಗೆ ||
*******