Showing posts with label ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ purandara vittala ANGANEYARELLA NEREDU CHAPPAALIKKUTA. Show all posts
Showing posts with label ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ purandara vittala ANGANEYARELLA NEREDU CHAPPAALIKKUTA. Show all posts

Saturday 4 December 2021

ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ purandara vittala ANGANEYARELLA NEREDU CHAPPAALIKKUTA




ಅಂಗನೆಯರೆಲ್ಲ ನೆರೆದು ಚಪ್ಪಳೆಯಿಕ್ಕುತ ದಿವ್ಯ |
ಮಂಗಳನಾಮವ ಪಾಡಿ ರಂಗನ ಕುಣಿಸುವರು ಪ

ಪಾಡಿ ಮಲಹರಿ ಭೈರವ ಸಾರಂಗ ದೇಶಿ |
ಗುಂಡಕ್ರಿ ಗುಜ್ಜರಿ ಕಲ್ಯಾಣ ರಾಗದಿ ||
ತಂಡತಂಡದಿ ನೆರೆದು ರಂಗನ ಉಡಿಗಂಟೆ |
ಢಂ ಢಣ ಢಣಿರೆಂದು ಹಿಡಿದು ಕುಣಿಸುವರು 1

ತುತ್ತೂರಿ ಮೌರಿ ತಾಳ ದಂಡಿಗೆ ಮದ್ದಲೆ |
ಉತ್ತಮ ಶಂಖದ ನಾದಗಳಿಂದ ||
ಸುತ್ತಮುತ್ತಿ ನಾರಿಯರು ತಾಥೈಯೆಂದು |
ಅರ್ತಿಯಿಂದ ಕುಣಿಸುವರು ಪರವಸ್ತು ತತ್ಥೈಹಿಡಿದು 2

ಕಾಮಿನಿಯರೆಲ್ಲ ನೆರೆದು ಕಂದನೊಡನಾಟವಾಡಿ |
ಪ್ರೇಮದಿಂದ ಬಿಗಿಬಿಗಿದಪ್ಪಿ ಮುದ್ದಾಡಿ ||
ಕಾಮಿತ ಫಲವೀವ ಭಕುತಜನರೊಡೆಯ |
ಸ್ವಾಮಿ ಶ್ರೀ ಪುರಂದರವಿಠಲರಾಯನ 3
***

pallavi

anganeyarella neredu cappALikkuda divya mangaLa nAmava pADi rangana kuNisuvaru

caraNam 1

pADi malhAri bhairavi sAranga dEsi guNDakriya gunjari kalyANi rAgadi daNDa
daNDadali neredu rangana uDiya ghaNTe ghaN ghaN ghaN ghNirendu hiDidu kuNisuvaru

caraNam 2

tittiri meLari tALa daNDige mattale uttamada shankha shabda nAdagaLinda
sutta mutti nAriyara tattai tattai thAyendu ardiyinda kuNisuvaru paravastuva hiDidu

caraNam 3

kAminiyarella neredu kandanATagaLanADi prEmadinda bigidappi muddADi
kAmita phalavIva bhakuta janaroDeya svAmi purandara viTTalarAyanna
***

ಪಲ್ಲವಿ:

ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ
ಮಂಗಳ ನಾಮವ ಪಾಡಿ ರಂಗನ ಕುಣಿಸುವರು

ಚರಣ

1:

ಪಾಡಿ ಮಲ್ಹಾರಿ ಭೈರವಿ ಸಾರಂಗ ದೇಶಿ ಗುಂಡಕ್ರಿಯ ಗುರ್ಜರಿ ಕಲ್ಯಾಣಿ ರಾಗದಿ ತಂಡ
ತಂಡದಲಿ ನೆರೆದು ರಂಗನ ಉಡಿಯ ಘಂಟೆ ಘಣ್ ಘಣ್ ಘಣ್ ಘಣಿರೆಂದು ಹಿಡಿದು ಕುಣಿಸುವರು

2:

ತಿತ್ತಿರಿ ಮೇಳರಿ ತಾಳ ದಂಡಿಗೆ ಮದ್ದಲೆ ಉತ್ತಮದ ಶಂಖ ಶಬ್ದ ನಾದಗಳಿಂದ
ಸುತ್ತ ಮುತ್ತಿ ನಾರಿಯರ ತತ್ತೈ ತತ್ತೈ ಥಾಯೆಂದು ಅರ್ತಿಯಿಂದ ಕುಣಿಸುವರು ಪರವಸ್ತುವ ಹಿಡಿದು

3:

ಕಾಮಿನಿಯರೆಲ್ಲ ನೆರೆದು ಕಂದನಾಟಗಳನಾಡಿ ಪ್ರೇಮದಿಂದ ಬಿಗಿದಪ್ಪಿ ಮುದ್ದಾಡಿ
ಕಾಮಿತ ಫಲವೀವ ಭಕುತ ಜನರೊಡೆಯ ಸ್ವಾಮಿ ಪುರಂದರ ವಿಟ್ಠಲರಾಯನ್ನ
*******