Showing posts with label ರಕ್ಷಿಸು ರಕ್ಷಿಸು ದೇವವಿಶ್ವಕುಕ್ಷನೆ prasannavenkata. Show all posts
Showing posts with label ರಕ್ಷಿಸು ರಕ್ಷಿಸು ದೇವವಿಶ್ವಕುಕ್ಷನೆ prasannavenkata. Show all posts

Saturday, 16 November 2019

ರಕ್ಷಿಸು ರಕ್ಷಿಸು ದೇವವಿಶ್ವಕುಕ್ಷನೆ ankita prasannavenkata

by ಪ್ರಸನ್ನವೆಂಕಟದಾಸರು
ರಕ್ಷಿಸು ರಕ್ಷಿಸು ದೇವವಿಶ್ವಕುಕ್ಷನೆ ಭಕ್ತ ಸಂಜೀವಪಕ್ಷಿಗಮನ ಕಾಯೊದಾತಭೃತ್ಯಪಕ್ಷನೆ ಶ್ರೀ ಪ್ರಾಣನಾಥ ಪ.

ಜಾರಿದ ಶ್ರ್ರುತಿಯ ತಂದವನೆ ಉದಾರಿವಿಕ್ರಮತಮಹರನೆವಾರಿಧಿಯೊಳುದಿಸಿದನೆ ಮಂದರಗಿರಿಯನೆತ್ತಿದನೆ1

ರಂಭೆಗೆ ತತ್ವ ಹೇಳಿದನೆ ಹೇಮಾಂಬಕನ ಚುಚ್ಚಿದವನೆಕಂಬವ ಸೀಳಿ ನಿಂದವನೆ ಆದಂಭೋಳಿವೈರಿಬಾಲಪನೆ2

ಪದ್ಮಜಾಂಡವನೊಡೆದವನೆಬಲಿಸದ್ಮವ ಬಿಡದೆ ಕಾಯ್ದವನೆಛದ್ಮಿ ಪಾರ್ಥಿವರ ಸಂಹರನೆಕರಪದ್ಮದಿ ಪರಶು ಪಿಡಿದವನÉ 3

ಅಡವಿ ಪ್ರಾಣಿಗಳನಾಳುವನೆ ಹತ್ತುಹೆಡಕಿನವನ ತಲೆಕಡಿದವನೆಮಡದಿಗೆ ಗಿಡವನಿತ್ತವನೆ ಭೀಮಮಡದಿಯ ಲಜ್ಜೆ ಕಾಯ್ದವನೆ 4

ಮಿಥ್ಯದಹೊಲಬುಹೇಳಿದನೆಖಳದೈತ್ಯರ ವಶವ ಮಾಡಿದನೆಮತ್ತಕಲಿವಪುಹರನೆ ನನ್ನಕರ್ತಪ್ರಸನ್ವೆಂಕಟ ನೀನೆ5
********