Showing posts with label ಶ್ರೀಗಣರಾಯ ಶ್ರೀ ಗಣರಾಯ ವಂದಿಸುವೆನೀಗ ramesha SRI GANAARAYA SRI GANARAAYA VANDISUVENEEGA. Show all posts
Showing posts with label ಶ್ರೀಗಣರಾಯ ಶ್ರೀ ಗಣರಾಯ ವಂದಿಸುವೆನೀಗ ramesha SRI GANAARAYA SRI GANARAAYA VANDISUVENEEGA. Show all posts

Thursday, 2 December 2021

ಶ್ರೀಗಣರಾಯ ಶ್ರೀ ಗಣರಾಯ ವಂದಿಸುವೆನೀಗ ankita ramesha SRI GANAARAYA SRI GANARAAYA VANDISUVENEEGA



ಶ್ರೀ ಗಣರಾಯ ಶ್ರೀ ಗಣರಾಯ ಶ್ರೀ ಗಣರಾಯವಂದಿಸುವೆನೀಗ ಶ್ರೀ ಗಣರಾಯ ಪ.

ಆಕಾಶಕಭಿಮಾನಿ ಶ್ರೀಕಂಠನ ವರಪುತ್ರ ಏಕದಂತನೆ ವಿಘ್ನೇಶಏಕದಂತನೆ ವಿಘ್ನೇಶ ನಿನ್ನ ಪಾದ ಏಕಚಿತ್ತದಲೆಬಲಗೊಂಬೆ ವಂದಿಸುವೆ ಶ್ರೀ ಗಣರಾಯ 1

ನೆನೆಯಕ್ಕಿ ನೆನಗಡಲೆ ಗೊನೆ ಬಾಳೆಹಣ್ಣು ಘನವಾದ ಚಿಗಳಿ ತಂಬಿಟ್ಟುಫನವಾದ ಚಿಗಳಿ ತಂಬಿಟ್ಟು ತಂದಿಹೆ ಗಣಪತಿಮತಿಯ ಕರುಣಿಸು ವಂದಿಸುವೆ 2

ನಿತ್ಯ ಬ್ರಹ್ಮಚರ್ಯ ಉತ್ತಮ ವ್ರತವುಳ್ಳಮತ್ತು ಪಾರ್ವತಿಯ ತನಯನೆಮತ್ತು ಪಾರ್ವತಿಯ ತನಯನೆ ವಿಘ್ನೇಶನೆ ಭಕ್ತಿಯಿಂದ ಮೊದಲೆ ಬಲಗೊಂಬೆ 3

ಸುಲಭದಿ ರುಕ್ಮಿಣಿಯ ಗೆಲಿಯಬೇಕೆನುತಲೆಹಲಧರನ ತಂಗಿ ಸುಭದ್ರೆಹಲಧರನ ತಂಗಿ ಸುಭದ್ರೆ ಮೊದಲಿಗೆ ಚಲುವ ಗಣಪತಿಯ ನೆನೆದಳು 4

ಹಸ್ತಿಮೊಗದವನ ಮತ್ತಾರು ಪೂಜಿಸಿದರುಮತ್ತೆ ಪರೀಕ್ಷಿತ ಮೊದಲಾಗಿಮತ್ತೆ ಪರೀಕ್ಷಿತ ಮೊದಲೆ ಪೂಜೆಯ ಮಾಡಿಪ್ರತ್ಯಕ್ಷ ರಾಜ್ಯ ಪಡೆದನು 5

ಆನೆಯ ಮುಖದವನ ಮತ್ತಾರು ಪೂಜಿಸಿದರುತಾನು ಮಾಂಧಾತರಾಯ ಮೊದಲಾಗಿತಾನು ಮಾಂಧಾತರಾಯ ಮೊದಲು ಪೂಜೆಯ ಮಾಡಿನಾನಾ ಸೌಭಾಗ್ಯ ಪಡೆದನು 6

ಮುದ್ದು ರಾಮೇಶನ ಪೂಜಿಸಿ ರಾವಣನ ಗೆಲಿದನುಮ್ಯಾಲೆ ಪಾಂಡವರು ಮೊದಲಾಗಿಮ್ಯಾಲೆ ಪಾಂಡವರು ಮೊದಲ ಪೂಜೆಯ ಮಾಡಿಹೀನ ಕೌರವರ ಗೆಲಿದರು 7

****